
ದಕ್ಷಿಣ ಭಾರತದ ಖ್ಯಾತ ನಟಿ ಲೈಲಾ ತಮ್ಮ ಸುಂದರ ನಗು ಮತ್ತು ಅಭಿನಯದ ಮೂಲಕವೇ ‘ಸ್ಮೈಲಿಂಗ್ ಕ್ವೀನ್’ ಎಂದೇ ಹೆಸರುವಾಸಿಯಾಗಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ‘ದೇವರ ಮಗ’ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ‘ರಾಮಕೃಷ್ಣ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಈ ಸುಂದರಿಯ ನಗುವಿನ ಹಿಂದೆ ಒಂದು ಆಘಾತಕಾರಿ ಸತ್ಯ ಅಡಗಿದೆ. ಲೈಲಾ ಅವರ ಈ ನಗು ಅವರಿಗೆ ವರವಲ್ಲ, ಬದಲಾಗಿ ಒಂದು ರೀತಿಯ ಶಾಪವಾಗಿ ಪರಿಣಮಿಸಿದೆ ಎಂಬುದು ವೈದ್ಯಕೀಯ ಲೋಕದ ವಿಚಿತ್ರ ಸಂಗತಿಯಾಗಿದೆ.

ಲೈಲಾ ಅವರಿಗೆ ಕಾಡುತ್ತಿರುವ ಈ ವಿಚಿತ್ರ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ‘ಪ್ಯಾಥೋಲಾಜಿಕಲ್ ಲಾಫಿಂಗ್’ (Pathological Laughing) ಎಂದು ಕರೆಯಲಾಗುತ್ತದೆ. ಅತಿಯಾಗಿ ನಗುವುದು ಕೂಡ ಒಂದು ಕಾಯಿಲೆ ಎಂದರೆ ನಂಬಲು ಅಸಾಧ್ಯವಾದರೂ, ಲೈಲಾ ವಿಷಯದಲ್ಲಿ ಇದು ಸತ್ಯವಾಗಿದೆ. ಈ ಕಾಯಿಲೆಯಲ್ಲಿ ಮಿದುಳು ಭಾವನೆಗಳ ಮೇಲೆ ಹಿಡಿತ ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಗಂಭೀರ ಸನ್ನಿವೇಶಗಳಲ್ಲಿಯೂ ನಗುವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ನಗು ಆರಂಭವಾದರೆ ಸುಮಾರು 30 ಸೆಕೆಂಡ್ಗಳ ಕಾಲ ಅದನ್ನು ತಡೆಯಲು ಅವರಿಗೆ ಸಾಧ್ಯವಾಗುವುದಿಲ್ಲವಂತೆ.
ಈ ಭೀಕರ ಕಾಯಿಲೆಯು ಸೈಲೆಂಟ್ ಕಿಲ್ಲರ್ ಡಿಸೀಸ್ನಂತೆ ಲೈಲಾ ಅವರನ್ನು ಕಾಡುತ್ತಿದೆ. ಸಾಧಾರಣವಾಗಿ ಜನರು ಸಂತೋಷವಾದಾಗ ನಗುತ್ತಾರೆ, ಆದರೆ ಈ ಸಮಸ್ಯೆಯು ಭಾವನೆಗಳಿಗೂ ಮಿದುಳಿನ ಸಂಪರ್ಕಕ್ಕೂ ಇರುವ ಸಮತೋಲನ ತಪ್ಪಿದಾಗ ಉಂಟಾಗುತ್ತದೆ. ವೈದ್ಯಕೀಯ ಲೋಕಕ್ಕೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿರುವ ಈ ಸಮಸ್ಯೆ ಲೈಲಾ ಅವರ ವೃತ್ತಿ ಜೀವನದಲ್ಲೂ ಸಾಕಷ್ಟು ಮುಜುಗರದ ಸನ್ನಿವೇಶಗಳನ್ನು ಸೃಷ್ಟಿಸಿತ್ತು. ಸದಾ ನಗುವ ಮುಖದ ಹಿಂದೆ ಇಂತಹದೊಂದು ನೋವು ಅಡಗಿದೆ ಎಂಬ ವಿಚಾರ ಈಗ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.




