
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರೋಹಿತ್ ಪದಕಿ ನಿರ್ದೇಶನದ ಮುಂಬರುವ ಚಿತ್ರ ‘ಉತ್ತರಕಾಂಡ’ ಇತ್ತೀಚೆಗೆ ಸೋಮವಾರ ಸೆಟ್ಟೇರಿದೆ. ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರಕ್ಕೆ ಟೋಬಿ ಖ್ಯಾತಿಯ ನಟಿ ಚೈತ್ರ ಆಚಾರ್ ಎಂಟ್ರಿ ಕೊಟ್ಟಿದ್ದಾರೆ ಎಂದು ಚಿತ್ರತಂಡ ಘೋಷಿಸಿದೆ.
‘ಟೋಬಿ’ ಮತ್ತು ಅವರ ಇತ್ತೀಚಿನ ಚಿತ್ರ ‘ಬ್ಲಿಂಕ್’ ನಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಚೈತ್ರ, ಈ ಆಕ್ಷನ್-ಪ್ಯಾಕ್ಡ್ ಸಿನಿಮಾದಲ್ಲಿ ‘ಲಚ್ಚಿ’ ಎಂಬ ಮತ್ತೊಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಉತ್ತರ ಕರ್ನಾಟಕದ ಸತ್ವವನ್ನು ಅದರ ಆಡುಭಾಷೆಯ ಮೂಲಕ ಚಿತ್ರವು ತೆರೆಮೇಲೆ ಕಾಣಿಸಿಕೊಳ್ಳಲಿದೆ. ‘ಉತ್ತರಕಾಂಡ’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ವಿಜಯಪುರ ನಗರದಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ‘ಉತ್ತರಕಾಂಡ’ ಚಿತ್ರಕ್ಕೆ ಬಾಲಿವುಡ್ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ನೀಡಲಿದ್ದು, ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
https://twitter.com/Chaithra_Achar_/status/1780110078169018588?ref_src=twsrc%5Etfw%7Ctwcamp%5Etweetembed%7Ctwterm%5E1780110078169018588%7Ctwgr%5Eda8130ce6825861e6beba29b3832a43a329ea81f%7Ctwcon%5Es1_&ref_url=https%3A%2F%2Fvistaranews.com%2Fcinema-film%2Fsandalwood%2Futtarakaanda-movie-chaithra-j-achar-acting-in-uttarakaanda-kannada-movie%2F632785.html




