Tuesday, February 10, 2026
19.8 C
Bengaluru
Google search engine
LIVE
ಮನೆ#Exclusive NewsTop Newsಜೈಲಿನಿಂದ ಬಂದರೂ ಬದಲಾಗದ ರಜತ್;ಡಿಸಿ ಕಚೇರಿ ಮುಂದೆ ಸಿಗರೇಟ್ ಸೇದಿ ಪೋಸ್

ಜೈಲಿನಿಂದ ಬಂದರೂ ಬದಲಾಗದ ರಜತ್;ಡಿಸಿ ಕಚೇರಿ ಮುಂದೆ ಸಿಗರೇಟ್ ಸೇದಿ ಪೋಸ್

ಬಿಗ್ ಬಾಸ್ ಖ್ಯಾತಿಯ ರಜತ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಈ ಹಿಂದೆ ಮಚ್ಚು ಹಿಡಿದು ಫೋಟೋಶೂಟ್ ಮಾಡಿ ಜೈಲು ಪಾಲಾಗಿದ್ದ ಇವರು, ಈಗ ಮೈಸೂರಿನ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿಗರೇಟ್ ಸೇದುತ್ತಾ ವಿಡಿಯೋ ಮಾಡುವ ಮೂಲಕ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರವಾಗಿದ್ದರೂ, ವಿಲನ್ ಲುಕ್‌ನಲ್ಲಿ ಕಾರಿನಿಂದ ಇಳಿಯುವ ದೃಶ್ಯವನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜೈಲಿನಿಂದ ಬಂದರೂ ಬುದ್ಧಿ ಕಲಿಯದ ರಜತ್ ವರ್ತನೆಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾರಂಪರಿಕ ತಾಣಗಳ ಗೌರವ ಕಾಪಾಡುವ ಬದಲು, ಇಂತಹ ಕಾನೂನು ವಿರೋಧಿ ಕೃತ್ಯಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈಗಾಗಲೇ ಒಮ್ಮೆ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಕಂಬಿ ಎಣಿಸಿದ್ದ ರಜತ್, ಈಗ ಮತ್ತೆ ನಿಷೇಧಿತ ಸ್ಥಳದಲ್ಲಿ ಧೂಮಪಾನದ ಫೋಟೋಶೂಟ್ ನಡೆಸಿರುವುದು ಪೋಲೀಸರ ಗಮನಕ್ಕೆ ಬಂದಿದ್ದು, ಮುಂದಿನ ಕ್ರಮದ ನಿರೀಕ್ಷೆಯಲ್ಲಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments