ರಾಜ್ಯಸಿನಿಮಾಸುದ್ದಿ

ಬಿಗ್​​ ಬಾಸ್​​ ಮನೆಗೆ ಬೀಗ.. ಹೈ ಕೋರ್ಟ್​ ಮೊರೆ ಹೋದ ಜಾಲಿವುಡ್ ಸ್ಟುಡಿಯೋ..!

ಬೆಂಗಳೂರು: ಕನ್ನಡದ ರಿಯಾಲಿಟಿ ಬಿಗ್​​ ಬಾಸ್​-12 ಬಿಡದಿ ಬಳಿ ನಡೆಯುತ್ತಿದ್ದ ಜಾಲಿವುಡ್​​ ಸ್ಟುಡಿಯೋವನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬಂದ್‌ ಮಾಡಿದೆ.

ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋವನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬಂದ್‌ ಮಾಡಿದೆ. ಪರಿಣಾಮ ಎಲ್ಲಾ ಸ್ಪರ್ಧಿಗಳು ಎರಡೇ ವಾರಕ್ಕೆ ಶೋದಿಂದ ಎಲಿಮಿನೇಟ್‌ ಆಗಿದ್ದಾರೆ.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಇಂದು ಜಾಲಿವುಡ್ ಸ್ಟುಡಿಯೋಸ್ ಹೈಕೋರ್ಟ್ ಮೊರೆ ಹೋಗಲಿದೆ ಎಂದು ತಿಳಿದುಬಂದಿದೆ. ಬಿಗ್ ಬಾಸ್ ನ ಮುಂದಿನ ದಿನಗಳು ಹೇಗೆ ಬೇರೆ ಕಡೆ ಶೋ ನಡೆಸುವುದೇ ಅಥವಾ ಸದ್ಯಕ್ಕೆ ಸ್ಥಗಿತಗೊಳಿಸುವುದೇ ಎಂದು ಚರ್ಚಿಸುತ್ತಿದೆ. ಇಂದೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಬಿಗ್ ಬಾಸ್ ನ ಎಲ್ಲಾ 17 ಮಂದಿ ಸ್ಪರ್ಧಿಗಳು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಇರುತ್ತಾರೆ ಎನ್ನಲಾಗಿದೆ. ಸ್ಪರ್ಧಿಗಳಿಗಾಗಿ 12 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

Comments (0)

Your email address will not be published. Required fields are marked *

Back to top button