Wednesday, December 10, 2025
26.6 C
Bengaluru
Google search engine
LIVE
ಮನೆಮನರಂಜನೆಫ್ರೆಂಡ್ ​ಶಿಪ್​​​​ಗೆ ಇನ್ನೊಂದು ಹೆಸರೇ ಗಿಲ್ಲಿ-ಕಾವ್ಯಾರದ್ದು..!

ಫ್ರೆಂಡ್ ​ಶಿಪ್​​​​ಗೆ ಇನ್ನೊಂದು ಹೆಸರೇ ಗಿಲ್ಲಿ-ಕಾವ್ಯಾರದ್ದು..!

ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ಹಾಗೂ ಕಾವ್ಯಾ ಅವರ ಗೆಳೆತನ ಎಲ್ಲರ ಗಮನ ಸೆಳೆಯುತ್ತಿದೆ ಎಂದರೆ ತಪ್ಪಲ್ಲ. ಇಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಮನೆಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಪರಸ್ಪರರ ಆಸರೆಯಾಗಿ ಉತ್ತಮ ರೀತಿಯಲ್ಲಿ ಬಿಗ್‌ಬಾಸ್‌ ಮನೆಯ ನೆಚ್ಚಿನ ಸ್ಪರ್ಧಿಗಳಾಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಒಂಟಿ ಹಾಗೂ ಜಂಟಿ ಎಂಬ ಕಾನ್ಸೆಪ್ಟ್ ಜೊತೆ ಆಟ ಪ್ರಾರಂಭಿಸಲಾಯಿತು. ಕಾವ್ಯಾ ಹಾಗೂ ಗಿಲ್ಲಿ ಜಂಟಿ ಆದರು. ಎರಡು ವಾರಗಳ ಕಾಲ ಇವರು ಎಲ್ಲ ಕಡೆಗಳಲ್ಲೂ ಒಟ್ಟಿಗೆ ತೆರಳಬೇಕಿತ್ತು. ಈ ಸಂದರ್ಭದಲ್ಲಿ ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ ಅಂದರೆ ತಪ್ಪಲ್ಲ.

ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ನಿಲ್ಲೋದು ಕಡಿಮೆ ಅಂತಲೇ ಹೇಳಬಹುದು ಆದರೆ, ಗಿಲ್ಲಿ-ಕಾವ್ಯಾ ಆ ರೀತಿ ಅಲ್ಲವೇ ಅಲ್ಲ. ಇವರಿಬ್ಬರ ಸ್ನೇಹ ಕಂಡು ಮೆಚ್ಚಿದ್ದಕ್ಕಿಂತ ಹೊಟ್ಟೆ ಉರಿ ಪಟ್ಟವರೇ ಹೆಚ್ಚು. ಗಿಲ್ಲಿ ಮೇಲೆ ಯಾವುದಾದರೂ ಆರೋಪ ಕೇಳಿ ಬಂದರೆ ಗಿಲ್ಲಿ ಪರವಾಗಿ ಕಾವ್ಯ ನಿಲ್ಲುತ್ತಾಳೆ. ಅದೇ ಕಾವ್ಯಾ ಪರವಾಗಿ ಆರೋಪ ಬಂದಾಗ ಅಲ್ಲಿ ಗಿಲ್ಲಿ ಇದ್ದೆ ಇರುತ್ತಾನೆ.

ಅಶ್ವಿನಿ ಮತ್ತು ಕಾವ್ಯಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದಾಗ ಕಾವ್ಯಪರ ನಿಂತಿದ್ದು ಮಾತ್ರ ಗಿಲ್ಲಿ.
ಗಿಲ್ಲಿಗೆ ಗಡ್ಡ ತೆಗೆಯಲು ಹೇಳಿದಾಗ ಮರುಮಾತನಾಡದೇ ನೀಟಾಗಿ ಶೇವ್‌ ಮಾಡಿಕೊಂಡ ಗಿಲ್ಲಿ ಹೊಸ ಲುಕ್‌ ನೊಂದಿಗೆ ಕಂಗೊಳಿಸಿದ್ದು ಮಾತ್ರ ಸುಳ್ಳಲ್ಲ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments