Freedom TV
ಕನ್ನಡ ನಾಮಫಲಕ ಅಳವಡಿಸದ ವ್ಯಾಪಾರಿಗಳು; ಕರವೆಯಿಂದ ಮತ್ತೆ ಹೋರಾಟಕ್ಕೆ ತಯಾರಿ

ಬೆಂಗಳೂರು : ಶೇಕಡ 60 ರಷ್ಟು ಕನ್ನಡ ನಾಮಫಲಕ ಕಡ್ಡಾಯಕ್ಕೆ ಡೆಡ್ಲೈನ್ ನೀಡಿದರೂ ಕನ್ನಡ ವಾಣಿಜ್ಯ ಮಳಿಗೆಗಳ ಮಾಲೀಕರು ನಾಮಫಲಕ ಇನ್ನೂ ಅಳವಡಿಸಿಲ್ಲ. ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಕರವೇ ಸಭೆ ನಡೆಸಲಾಗಿದೆ.
ಕೆಲ ದಿನಗಳ ಹಿಂದೆ ಕನ್ನಡ ನಾಮಫಲಕ ಅಳವಡಿಕೆಗೆ ಕರವೇ ಬೃಹತ್ ಹೋರಾಟ ಮಾಡಿತ್ತು. ಆದರೂ ಕನ್ನಡ ನಾಮಫಲಕ ಅಳವಡಿಕೆಗೆ ವಾಣಿಜ್ಯ ಮಳಿಗೆಗಳು ಹಿಂದೇಟು ಹಾಕಿವೆ. ಹೀಗಾಗಿ ಇಂದು ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.




