Top Newsರಾಜಕೀಯ

ST Somashekhar; ಕುತೂಹಲ ಕೆರಳಿಸಿದ ಎಸ್​ಟಿ ಸೋಮಶೇಖರ್ ಆತ್ಮಸಾಕ್ಷಿ ಮತ!

ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮುಂದುವರೆದಿದ್ದು, ಬಿಜೆಪಿಗೆ ಅಡ್ಡಮತದಾನದ ಭೀತಿ ಎದುರಾಗಿದೆ.

ಕಾರಣ ಮಾಜಿ ಮಂತ್ರಿ, ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ತಮ್ಮ ಮತವನ್ನು ಪಕ್ಷದ ಸೂಚನೆ ಪ್ರಕಾರ ಚಲಾಯಿಸಿದ್ದಾರಾ? ಅಥ್ವಾ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದಾರಾ ಎನ್ನುವುದು ಖಚಿತವಾಗುತ್ತಿಲ್ಲ.

ಮತಚಲಾಯಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ಎಸ್​ಟಿ ಸೋಮಶೇಖರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದ್ರೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮತಚಲಾಯಿಸಿದ್ದೇನೆ ಎಂದಷ್ಟೇ ಹೇಳಿ ಮುಂದೆ ಸಾಗಿದ್ದಾರೆ. ಮತಚಲಾಯಿಸಿ ವಾಪಸ್ ಬರುವಾಗಲೇ ಎಸ್​ ಟಿ ಸೋಮಶೇಖರ್ ಅವರದ್ದು ಅದೇ ಉತ್ತರವಾಗಿತ್ತು.

ಅಲ್ಲದೇ, ವಿಧಾನಸೌಧದಲ್ಲಿರುವ ಬಿಜೆಪಿ ಕಚೇರಿ ಕಡೆಯೂ ಎಸ್ ಟಿ ಸೋಮಶೇಖರ್ ಕಣ್ಣೆತ್ತಿಯೂ ನೋಡಲಿಲ್ಲ.

ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ವ್ಹಿಪ್ ನೀಡಲು ಹೋದರೂ ಎಸ್​ಟಿ ಸೋಮಶೇಖರ್ ಅದನ್ನು ಸ್ವೀಕಾರ ಮಾಡಲಿಲ್ಲ.

ಲಿಫ್ಟ್​ನಲ್ಲಿ ಜೊತೆಯಾದ ಹೆಚ್​ಡಿ ರೇವಣ್ಣ ಅವರು ಕೆದಕಿದಾಗಲೂ, ಯಾರಿಗೆ ಮತ ಹಾಕಿದೆ ಎಂಬುದರ ಗುಟ್ಟನ್ನು ಎಸ್​ಸಿ ಸೋಮಶೇಖರ್ ಬಿಟ್ಟುಕೊಡಲಿಲ್ಲ

ಈ ಬೆಳವಣಿಗೆ ಬಿಜೆಪಿಗೆ ಅಡ್ಡಮತದಾನದ ಆತಂಕ ತಂದೊಡ್ಡಿದೆ. ಮತ ಎಣಿಕೆ ನಂತರ ಎಸ್​ಟಿ ಸೋಮಶೇಖರ್ ಆತ್ಮಸಾಕ್ಷಿ ಮತದ ಗುಟ್ಟು ಅನಾವರಣಗೊಳ್ಳಲಿದೆ.

Comments (0)

Your email address will not be published. Required fields are marked *

Back to top button