Top Newsಮನರಂಜನೆ

Actor Darshan; ಕಾಂಟ್ರೋವರ್ಸಿಗಳಿಗೆ ಡೋಂಟ್​ಕೇರ್; ಪತ್ನಿ ಜೊತೆ ದಚ್ಚು ಮಸ್ತ್ ಡ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ (DarshanthugudeepaShrinivas) ಕಾಂಟ್ರವರ್ಸಿಗಳಿಗೆ ಎಂದಿಗೂ ತಲೆಕೆಡಿಸಿಕೊಳ್ಳಲ್ಲ ಅನ್ನೋದು ಮತ್ತೆ ಋಜುವಾತಾಗಿದೆ.

ತಮ್ಮ ಬೀಡುಬೀಸಾದ ಹೇಳಿಕೆಗಳ ಮೂಲಕ ಮತ್ತೆ ಮತ್ತೆ ಸುದ್ದಿ ಆಗುತ್ತಿರುವ ನಟ ದರ್ಶನ್ (Actor Darshan) ವಿರುದ್ಧ ಹಲವು ಮಹಿಳಾ ಸಂಘಟನೆಗಳು ಮೇಲಿಂದ ಮೇಲೆ ದೂರು ನೀಡ್ತಿವೆ. ಆದರೆ, ಇದಕ್ಕೆ ಅಭಿಮಾನಿಗಳ ಪಾಲಿನ ಡಿಬಾಸ್​ ವಿಚಲಿತರಾಗಿಲ್ಲ.

ಕಾಟೇರಾ (Katera) ಯಶಸ್ಸಿನಲ್ಲಿ ತೇಲುತ್ತಿರುವ ನಟ ದರ್ಶನ್ ಡೆವಿಲ್ (Devil) ಸಿನಿಮಾ ಶೂಟಿಂಗ್​ನಲ್ಲಿಯೂ ಬ್ಯುಸಿ ಆಗಿದ್ದಾರೆ. ಇದರ ನಡುವೆಯೂ ನಟ ದರ್ಶನ್ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಿಗೆ ಸಮಯ ನೀಡಿದ್ದಾರೆ.

ಪಾರ್ಟಿಯೊಂದರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ (Vijayalakshmi Darshan)ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಖತ್ ವೈರಲ್ ಆಗಿದೆ.

https://www.instagram.com/reel/C3uH90dOWt5/?igsh=MTc4MmM1YmI2Ng==

ಪತ್ನಿವಿಜಯಲಕ್ಷ್ಮಿ ಜೊತೆ ಡ್ಯಾನ್ಸ್ ಮಾಡುವ ಮೂಲಕ.. ದರ್ಶನ್-ಪವಿತ್ರಗೌಡ (Darshan-PavitraGowda)ಎಪಿಸೋಡ್ ವಿವಾದ.. ಇವತ್ತು ಅವಳು.. ನಾಳೆ ಅವಳು.. ಎಂಬ ಸ್ಟೇಟ್ಮೆಂಟ್​ ಕಾಂಟ್ರೊವರ್ಸಿಗಳ ನಡುವೆ ನಮ್ಮ ದಾಂಪತ್ಯ ಜೀವನ ಚನ್ನಾಗಿಯೇ ಇದೆ ಪರೋಕ್ಷವಾಗಿ ನಟ ದರ್ಶನ್ ಉತ್ತರ ನೀಡಿದ್ದಾರೆ.
ವಿಜಯಲಕ್ಷ್ಮಿ ಜೊತೆ ಡ್ಯಾನ್ಸ್ ಮಾಡುವ ವಿಡಿಯೋ ಕಂಡು ದರ್ಶನ್ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ. ಇದೇ ಖುಷಿಯಲ್ಲಿ ಮಸ್ತ್ ಮಸ್ತ್ ಕಾಮೆಂಟ್ ಹಾಕುತ್ತುದ್ದಾರೆ.

Comments (0)

Your email address will not be published. Required fields are marked *

Back to top button