Freedom TV

ಇಂದು ಕನ್ನಡಕ್ಕಾಗಿ ಬೆಂಗಳೂರಿನಲ್ಲಿ ಬೀದಿಗಿಳಿಯಲಿವೆ ಕನ್ನಡ ಪರ ಸಂಘಟನೆಗಳು..!

ಬೆಂಗಳೂರು : ಕನ್ನಡ ನಾಮಫಲಕ ಕಡ್ಡಾಯ ಸಂಬಂಧ ಇಂದು ಕನ್ನಡ ಪರ ಸಂಘಟನೆಗಳು ರಾಜಭವನ ಮುತ್ತಿಗೆ ಹಾಕಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಹಾಕಲಿದ್ದು, ಕನ್ನಡ ಕಡ್ಡಾಯ ಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಿದೆ. ಇನ್ನು, ನಾಮಫಲಕ ಕನ್ನಡದ ದೊಡ್ಡ ಅಕ್ಷರಗಳಲ್ಲಿ ಕಡ್ಡಾಯ ಗೊಳಿಸಿಬೇಕು. ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಸಬೇಕು. ರೈಲ್ವೆ ,ಐಟಿ,ಬಿಟಿ,ಮಾಲ್ ಬ್ಯಾಂಕ್ ಗಳಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಹಿಂದಿ ಹೇರಿಕೆ ಹಾಗೂ ಹಿಂದಿ ನಾಮಫಲಕ ಬೇಡ. ನ್ಯಾಯಾಲಯಗಳಲ್ಲಿ ಕನ್ನಡ ಕಡ್ಡಾಯ ಗೊಳಿಸಬೇಕು. ಕನ್ನಡ ನಾಮಫಲಕ ಶಾಸನಸಭೆಯಲ್ಲಿ ಮಸೂದೆ ಆಗಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲಿದ್ದಾರೆ.

ಇನ್ನು ಪ್ರತಿಭಟನೆ ಹಾಗೂ ರಾಜಭವನ ಮುತ್ತಿಗೆ ಕಾರ್ಯಕ್ರಮದಲ್ಲಿ ಸ.ರಾ ಗೋವಿಂದು,ಕೆ ಆರ್ ಕುಮಾರ್,ಶಿವರಾಮೇಗೌಡ, ಪ್ರವೀಣ್ ಶೆಟ್ಟಿ,ವಾಟಾಳ್ ನಾಗರಾಜ್,ಹೆಚ್ ವಿ ಗಿರೀಶ್ ಸೇರಿದಂತೆ ಇತರೆ ಕನ್ನಡ ಪರ ಸಂಘಟನೆಗಳು ಭಾಗಿಯಾಗಲಿದ್ದಾರೆ.

Comments (0)

Your email address will not be published. Required fields are marked *

Back to top button