Freedom TV

ಇಂದು ರಾಜ್ಯ ಸರ್ಕಾರದ ವಿರುದ್ಧ ರೈತರ ಕಹಳೆ…!

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ ಪ್ರತಿಭಟನೆ ಮಾಡಲಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯಲಿರೋ ಬೆಂಗಳೂರು ಚಲೋ .. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರ ವಿರುದ್ದ ಪ್ರತಿಭಟನೆ ನಡೆಯಲಿದೆ.

ಬೇಡಿಕೆಗಳೇನು?
1. ತೆಲಂಗಾಣದಂತೆ ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು
2. ರೈತರ ಮದುವೆಯಾಗುವ ಹೆಣ್ಣುಮಕ್ಕಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡು ಯೋಜನೆ ಜಾರಿಮಾಡಬೇಕು
3. 9. ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಕಾವೇರಿ ಆಚ್ಚುಕಟ್ಟು ರೈತರಿಗೆ ವಂಚನೆ ಆಗಿದೆ
4. ಅವರಿಗೆ ಸರ್ಕಾರ ರೈತರಿಗೆ ಕೂಡಲೇ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡಬೇಕು.
5. ಕಬ್ಬಿನ ಎಫ್ ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು
6. ಕಬ್ಬು ಕಟಾವು ಸಾಗಣಿಕೆ ದರ ಕಾರ್ಖಾನೆಗಳು ಮನ ಬಂದಂತೆ ಕಡಿತ ಮಾಡಿವೆ
7. ಕಡಿತ ಮಾಡಿರುಚ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು.
5.‌ ಟನ್ ಕಬ್ಬಿಗೆ ರೂ-150 ಹೆಚ್ಚುವರಿ ದರ ಕೂಡಲೇ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕು
6. ಇಲ್ಲವೇ ಸರ್ಕಾರವೇ ರೈತರಿಗೆ ಹೆಚ್ಚುವರಿ ದರ ಪಾವತಿಸಬೇಕು
7. ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡಿ
8. ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಎಂ ಎಸ್ ಪಿ ಖರೀದಿ ಕೇಂದ್ರ ತೆರೆಯಬೇಕು
9. ರೈತರು ಬೆಳೆದ ಸಿರಿಧಾನ್ಯಗಳನ್ನು ಉತ್ಪಾದನಾ ವೆಚ್ಚಕ್ಕೆ ಬೆಂಬಲ ಬೆಲೆ, ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು
10. ಅದನ್ನು ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂತೆ ವ್ಯವಸ್ಥೆ ಜಾರಿಗೆ ಬರಬೇಕು
11. ರೈತರ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು, ಬೆಳೆ ವಿಮೆ ಪದ್ದತಿಯ ಕೆಲವು ನೀತಿ ಬದಲಾಗಬೇಕು.
12. ಬೆಳೆನಷ್ಟಕ್ಕೆ ಪರಿಹಾರ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಸಿಗುವಂತಾಗಬೇಕು.
13. ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕ
14. ಎಲ್ಲಾ ರೈತರಿಗೂ ಕೇವಲ ಪಹಣಿ ಪತ್ರ ಆಧರಿಸಿ ಕನಿಷ್ಠ 5 ಲಕ್ಷ ಆಧಾರ ರಹಿತ ಬಡ್ಡಿ ಇಲ್ಲದ ಸಾಲ ಕೊಡಿಸುವಂತೆ ಮಾಡಿ
15. ರಾಷ್ಟ್ರೀಯ ರೈತ ದಿನ ಡಿಸೆಂಬರ್ 23 ರಂದು, ರೈತರ ಹಬ್ಬದ ರೀತಿ ಆಚರಿಸಲು ಕ್ರಮ
16. ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ, ಉಪಕರಣಗಳು ಟ್ಯಾಕ್ಟರ್ ಬಿಡಿಭಾಗಗಳ ಜಿ ಎಸ್ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.
17. 8 ಲಕ್ಷಕ್ಕೂ ಹೆಚ್ಚು ಬಗರ್ ಹುಕ್ಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು.
18. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದಾಗಬೇಕು.
19. 60 ವರ್ಷ ತುಂಬಿದ ರೈತರಿಗೆ ಮಾಸಿಕ ಭತ್ಯೆ ಕನಿಷ್ಠ ರೂ 10,000 ಪಿಂಚಣಿ ಯೋಜನೆ ಜಾರಿಗೆ ತರಬೇಕು

Comments (0)

Your email address will not be published. Required fields are marked *

Back to top button