ರಾಜಕೀಯ
ಸೋನಿಯಾ ಗಾಂಧಿ ಆತ್ಮಕಥೆ ʻಬಿಲಾಂಗಿಂಗ್ʼ – ಪ್ರಕಟಣೆಗೆ ‘ಪೆಂಗ್ವಿನ್’ ನಕಾರ!
Sonia Gandhi's autobiography 'Belonging' – Penguin refuses to publish!

ಬೆಂಗಳೂರು : ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಆತ್ಮಕಥೆ ವಿವಾದಕ್ಕೀಡಾಗಿದ್ದು, ಸೋನಿಯಾ ಗಾಂಧಿ ಆತ್ಮಕಥೆ ‘ಬೆಲಾಂಗಿಂಗ್ʼ: ಎ ಜರ್ನಿ ಆಫ್ ಲವ್ ಇನ್ ಇಂಡಿಯಾ’ ಪುಸ್ತಕವನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆ ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’ ನಿರಾಕರಿಸಿದೆ.
ಹಸ್ತಪ್ರತಿಯ ಒಂದು ಭಾಗದಲ್ಲಿ ಸಂಪಾದಕೀಯ ಬದಲಾವಣೆ ಮತ್ತು ಕೆಲವು ಭಾಗ ತೆಗೆದು ಹಾಕುವಂತೆ ಪ್ರಕಾಶಕರು ಕೋರಿದ್ದರು. ಆದರೆ, ಸೋನಿಯಾ ಗಾಂಧಿ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಸೋನಿಯಾ ಗಾಂಧಿ & ಪ್ರಕಾಶಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗ್ತಿದೆ.
ಈ ಪುಸ್ತಕವನ್ನು ನವೆಂಬರ್ 10ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ಬಾಲ್ಯದ ಇಟಲಿ ಜೀವನ, ಭಾರತಕ್ಕೆ ಆಗಮನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜೊತೆಗೆ ವಿವಾಹ, 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿದ ವಿಚಾರ ಸೇರಿ ಹಲವು ಅಂಶಗಳು ಒಳಗೊಂಡಿದೆ.




