bengaluru

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ – 8 ಜನರ ವಿರುದ್ಧ FIR

Commotion during Eid Milad procession – FIR against 8 people.

ಬೆಂಗಳೂರು : ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಬಸವನಗುಡಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ 8 ಜನರ ವಿರುದ್ಧ FIR ದಾಖಲಾಗಿದೆ.

ಬಸವನಗುಡಿಯ ಕೆ.ಆರ್ ರಸ್ತೆಯಲ್ಲಿ ಬನಶಂಕರಿ ಕಡೆಯಿಂದ ಮೆರವಣಿಗೆ ಮಾಡುತ್ತಾ ಬರುತ್ತಿದ್ದ ಗುಂಪು ಪುನೀತ್ ಕೆರೆಹಳ್ಳಿ ಆಫೀಸ್ ಬಳಿ ಬಂದಾಗ ಘೋಷಣೆ ಕೂಗೋ ವಿಚಾರದಲ್ಲಿ ಗಲಾಟೆ ಆಗಿದೆ. ಹಿಂದೂ ಕಾರ್ಯಕರ್ತ ಪುನೀತ್ ಗೌಡ ತಲೆಗೆ ಗಂಭೀರ ಹಲ್ಲೆ ನಡೆಸಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೋಲಿಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಪುನೀತ್ ಕೆರೆಹಳ್ಳಿ ಗ್ಯಾಂಗ್ ಹಲ್ಲೆ ಮಾಡಿದವರನ್ನ ಬಂಧಿಸಬೇಕು ಎಂದು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪೋಲಿಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು.

ಗಲಭೆಯಲ್ಲಿ ಭಾಗಿಯಾಗಿದ್ದ ಎರಡು ಗುಂಪುಗಳ ವಿರುದ್ಧ ಮೂರು ಎಫ್‌ಐಆರ್ ದಾಖಲಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.‌

Comments (0)

Your email address will not be published. Required fields are marked *

Back to top button