ರಾಜ್ಯ

ಕಾವೇರಿ ಕಿಚ್ಚು – ಥಿಯೇಟರ್ ಮುಂದೆ ರೈತರ ಪ್ರೊಟೆಸ್ಟ್!

Cauvery Turmoil – Farmers Protest Outside the Theater!

ಬೆಂಗಳೂರು : ಕಾವೇರಿ ನೀರು ಬಿಡುಗಡೆ ವಿವಾದ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಗಡಿ ಜಿಲ್ಲೆಯಲ್ಲಿ ಕಾವೇರಿ ಕಿಚ್ಚು ಜೋರಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ತೀರ್ಪಿನ ವಿರುದ್ಧ ಗಡಿ ಜಿಲ್ಲೆಯಲ್ಲಿ ರೈತರು ಹಾಗೂ ಕನ್ನಡಪರ ಹೋರಾಟಗಾರರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯವರ ನಿಲುವನ್ನು ವಿರೋಧಿಸಿ, ಅವರ ಭಾವಚಿತ್ರವನ್ನು ಹರಿದುಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಕೈಯಲ್ಲಿ ಕೊಡ ಹಿಡಿದು ಥಿಯೇಟರ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿಗೂ ಹಾಗೂ ಕೃಷಿಗೂ ನೀರಿಲ್ಲದೆ ಪರದಾಡುತ್ತಿರುವ ಸ್ಥಿತಿಯನ್ನು ಬಿಂಬಿಸಲು ಖಾಲಿ ತಟ್ಟೆ ಹಾಗೂ ಲೋಟಗಳನ್ನು ಹಿಡಿದು, ಅವುಗಳನ್ನು ಬಾರಿಸುತ್ತಾ ರೈತರು ಪ್ರತಿಭಟನೆ ನಡೆಸಿದರು.

ಗಡಿ ಜಿಲ್ಲೆಯ ಚಿತ್ರಮಂದಿರವೊಂದರಲ್ಲಿ ಬಹುನಿರೀಕ್ಷಿತ ‘ಜನನಾಯಗನ್’ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಕಾವೇರಿ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದರು.

CWMA ತೀರ್ಪಿನ ವಿರುದ್ಧ ಆಕ್ರೋಶಗೊಂಡ ರೈತರು, ಕರ್ನಾಟಕ ಪಾಲಿಗೆ ತಮಿಳುನಾಡು ಸಿಎಂ ಸತ್ತೋದಾ.. ರಾಜ್ಯಕ್ಕೆ ಬಂದ ವೇಳೆ ಅವರ ನಿಲುವಿನ ಬಗ್ಗೆ ಹೇಳಲಿ ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ವೇಳೆ ರೈತರು ಡ್ಯಾನ್ಸ್ ಮಾಡುತ್ತಾ ಹಾಡು ಹೇಳಿ ವ್ಯಂಗ್ಯ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button