ಸಿನಿಮಾ

ಯುವ ಪ್ರತಿಭೆಗಳ ‘ಜಾಲಿ’ ಚಿತ್ರ ಜು.31ಕ್ಕೆ ರಿಲೀಸ್!

'Jolly', featuring young talent, to release on July 31!

ಯುವ ಪ್ರತಿಭಾನ್ವಿತ ತಂಡ ಸೇರಿಕೊಂಡು ನಿರ್ಮಿಸಿರುವ “ಜಾಲಿ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಕುತೂಹಲ ಹೆಚ್ಚು ಮಾಡಿದೆ. ಚಿತ್ರ ಜುಲೈ 31 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಚಿತ್ರದ ಟ್ರೈಲರ್ ಅನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಿಡುಗಡೆ ಮಾಡಿ, ಹೊಸ ಪ್ರತಿಭೆಗಳು ಸೇರಿ ಮಾಡಿರುವ ‘ಜಾಲಿ’ ಚಿತ್ರ ಯಶಸ್ವಿಯಾಗಲಿ. ಸಿನಿಮಾಕ್ಕೆ ಕೋಟಿಗಟ್ಟಲೆ ಹಣ ಹೂಡುವ ನಿರ್ಮಾಪಕರೇ ನಿಜವಾದ ಹೀರೋ ಅವರಿಗೆ ಮೊದಲು ಗೌರವ ಸಿಗಬೇಕು. ವರ್ಷಕ್ಕೆ 300 ರಿಂದ 400 ಸಿನಿಮಾಗಳು ಬರುತ್ತವೆ. ಆದರೆ ಶೋಕಿಗಾಗಿ ಸಿನಿಮಾ ಮಾಡದೆ, ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಜವಾಬ್ದಾರಿಯಿಂದ ಮಾಡಬೇಕು ಎಂದರು.

ಮೊಬೈಲ್, ಬಿಗ್‍ಬಾಸ್‍ಗಳ ಕಾರಣದಿಂದ ಜನರಿಗೆ ಬೆರಳ ತುದಿಯಲ್ಲೇ ಎಂಟರ್‍ಟೈನ್‍ಮೆಂಟ್ ಸಿಗುತ್ತಿದೆ. ಹೀಗಾಗಿ ಜನರನ್ನು ಥಿಯೇಟರ್‌ಗೆ ಕರೆತರುವುದು ದೊಡ್ಡ ಸವಾಲು ಈ ನಿಟ್ಟಿನಲ್ಲಿ ಚಿತ್ರತಂಡ ಮುಂದಾಗುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಹೇಳಿದರು.

ನಿರ್ದೇಶಕ ಕಮ್ ನಟ ತಾರುಷ್ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಸಂಬಂಧಗಳಲ್ಲಿನ ಮಿಸ್‍ಅಂಡರ್‍ಸ್ಟ್ಯಾಂಡಿಂಗ್‍ಗಳ ಕುರಿತು ಚಿತ್ರದಲ್ಲಿ ಕಥೆ ಹೆಣೆಯಲಾಗಿದ್ದು, ಕೊನೆಯಲ್ಲಿ ಉತ್ತಮ ಪರಿಹಾರ ಮತ್ತು ಸಂದೇಶವಿದೆ. ಚಿತ್ರದಲ್ಲಿ ಕಾಮಿಡಿ, ಆಕ್ಷನ್, ಅಪ್ಪ-ಮಗಳ ಎಮೋಷನ್ ಎಲ್ಲವೂ ಸಮ್ಮಿಶ್ರಣವಾಗಿದೆ ಎಂದರು.

ನಾಯಕ ಹಾಗೂ ನಿರ್ದೇಶಕ ತಾರುಷ್ ಅವರು ಸುಮಾರು 12 ವರ್ಷಗಳ ಕಾಲ ರಂಗಭೂಮಿ, ನಾಟಕ ಮತ್ತು ಕಿರುಚಿತ್ರಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಈ ಹಂತಕ್ಕೆ ಬಂದಿದ್ದಾರೆ. ಈ ಚಿತ್ರದ ಎಡಿಟಿಂಗ್ ಹಾಗೂ ಕೆಲವು ಹಾಡುಗಳ ಸಾಹಿತ್ಯವನ್ನೂ ತಾವೇ ಬರೆದಿದ್ದಾರೆ. ಚಿತ್ರಕ್ಕೆ ನಿತಿನ್ ರಾಜ್ ಸಂಗೀತ ನೀಡಿದ್ದು, ಒಟ್ಟು 6 ಹಾಡುಗಳಿವೆ. ಯೋಗರಾಜ್ ಭಟ್, ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದಾರೆ ಚಿತ್ರದಲ್ಲಿ ಹಿರಿಯ ನಟಿ ರೇಖಾ ದಾಸ್, ಶೋಭರಾಜ್ ಮುಂತಾದ ಅನುಭವಿ ಕಲಾವಿದರಿಗೂ ಚಿತ್ರದಲ್ಲಿ ಮುಖ್ಯ ಪಾತ್ರ ನೀಡಲಾಗಿದೆ.

ಕನ್ನಡ ಚಿತ್ರರಂಗವನ್ನು ಮತ್ತು ಹೊಸ ಪ್ರತಿಭೆಗಳನ್ನು ಉಳಿಸಿ ಬೆಳೆಸಲು ಪ್ರೇಕ್ಷಕರು ತಿಂಗಳಿಗೆ ಕನಿಷ್ಠ ಒಂದು ಅಥವಾ ಎರಡು ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಬೇಕೆಂದು ಇಡೀ ಚಿತ್ರತಂಡ ಮನವಿ ಮಾಡಿದೆ.

Comments (0)

Your email address will not be published. Required fields are marked *

Back to top button