ಸಿನಿಮಾ

‘ಫೌಜಿ’ ರಿಲೀಸ್ ಡೇಟ್ ಫಿಕ್ಸ್ – ಪ್ರಭಾಸ್ ಫ್ಯಾನ್ಸ್ ಖುಷ್!

'Fauji' release date fixed – Prabhas fans delighted!

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಖ್ಯಾತ ನಿರ್ದೇಶಕ ಹನು ರಾಘವಪುಡಿ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಫೌಜಿ’. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದ್ದು, ಡಿಸೆಂಬರ್ 3 ರಂದು ಸಿನಿಮಾ ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

‘ಬಾಹುಬಲಿ’ ನಂತರ ಪ್ರಭಾಸ್ ಮತ್ತೊಮ್ಮೆ ಒಂದು ಬೃಹತ್ ಪೀರಿಯಡ್ ಡ್ರಾಮಾದೊಂದಿಗೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಪ್ರಭಾಸ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ. ಚಿತ್ರದ ಬಿಡುಗಡೆ ದಿನಾಂಕದೊಂದಿಗೆ ಹೊಸ ಪೋಸ್ಟರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಸ್ಟರ್​​ನಲ್ಲಿ ಪ್ರಭಾಸ್ ಪಂಚೆ ಕಟ್ಟಿಕೊಂಡು ಮದುವೆ ವರನ ಲುಕ್​​ನಲ್ಲಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದುಕೊಂಡು ಕುಳಿತಿದ್ದಾರೆ. ಅವರ ದೇಹವೆಲ್ಲ ರಕ್ತದಿಂದ ಒದ್ದೆಯಾಗಿದೆ. ಹಲವಾರು ಶವಗಳು ಅವರ ಹಿನ್ನೆಲೆಯಲ್ಲಿವೆ. ‘ಬಟಾಲಿಯನ್ ಹೂ ಫೈಟ್ಸ್ ಅಲೋನ್’ ಎಂಬ ಟ್ಯಾಗ್ ಲೈನ್ ಪೋಸ್ಟರ್​​ನಲ್ಲಿದೆ. ಸಿನಿಮಾ ಡಿಸೆಂಬರ್ 3 ರಂದು ಬಿಡುಗಡೆ ಆಗಲಿದೆ.

‘ಸೀತಾ ರಾಮಂ’ ನಂತಹ ಕಲ್ಟ್ ಕ್ಲಾಸಿಕ್ ಚಿತ್ರವನ್ನು ನೀಡಿದ ಹನು ರಾಘವಪುಡಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಸೀತಾ ರಾಮಂ’ ನಲ್ಲಿ ಸೈನಿಕನ ಪ್ರೇಮಕಥೆಯನ್ನು ಅದ್ಭುತವಾಗಿ ತೆರೆಗೆ ತಂದಿದ್ದ ಅವರು, ಈ ಬಾರಿ ‘ಫೌಜಿ’ಯಲ್ಲಿ ಪ್ರಭಾಸ್ ಅವರನ್ನು ಸೈನಿಕನ ಪಾತ್ರದಲ್ಲಿ ತೋರಿಸುತ್ತಿದ್ದಾರೆ.

ದಕ್ಷಿಣ ಭಾರತದ ಅತಿ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರವು, ಬಿಡುಗಡೆಗೂ ಮುನ್ನವೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರಭಾಸ್ ಅವರ ಅಭಿಮಾನಿಗಳು ಡಿಸೆಂಬರ್ 3ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button