ದೇಶ/ವಿದೇಶ

ಹರ್ಮುಜ್ ದಾಳಿಗೆ ಅಮೆರಿಕ ಸೇಡು – ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಭೀಕರ ಏರ್‌ಸ್ಟ್ರೈಕ್‌!

America's revenge for the Hormuz attack - a fierce airstrike on more than 80 sites in Iran!

ವಾಷಿಂಗ್ಟನ್ : ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಿಡಿ ಹೊತ್ತಿಕೊಂಡಿದ್ದು, ಇರಾನ್ ಮತ್ತು ಅಮೆರಿಕ ನಡುವೆ ಭೀಕರ ಸಂಘರ್ಷ ಆರಂಭವಾಗಿದೆ. ಹರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಪಡೆಗಳು ನಡೆಸಿದ ಸರಣಿ ದಾಳಿಗಳಿಗೆ ಅಮೆರಿಕ ಅತ್ಯಂತ ಭೀಕರವಾಗಿ ಪ್ರತೀಕಾರ ತೀರಿಸಿಕೊಂಡಿದೆ. ಇರಾನ್‌ನ ಪ್ರಮುಖ ನಗರಗಳು ಹಾಗೂ ಸೇನಾ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದೆ.

ಕೆಲವು ದಿನಗಳ ಹಿಂದಷ್ಟೇ ಇರಾನ್ ಸಶಸ್ತ್ರ ಪಡೆಗಳು ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಹಡಗುಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆಸಿದ್ದವು. ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಈ ಜಲಮಾರ್ಗದಲ್ಲಿ ಇರಾನ್ ನಡೆಸಿದ ಉದ್ಧಟತನಕ್ಕೆ ಅಮೆರಿಕ ಈಗ ಅತ್ಯಂತ ಭೀಕರವಾಗಿಯೇ ತಿರುಗೇಟು ನೀಡಿದೆ.

ಇರಾನ್ ದೇಶದ ಒಳಗಿರುವ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯು ಕಳೆದ ಜೂನ್‌ನಲ್ಲಿ ನಡೆದ ದಾಳಿಗಿಂತ ಬರೋಬ್ಬರಿ 8 ಪಟ್ಟು ಹೆಚ್ಚು ತೀವ್ರ ಮತ್ತು ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ದ್ವಂಸಗೊಂಡ ಪ್ರಮುಖ ನೆಲೆಗಳು ಯಾವುವು?

ಅಮೆರಿಕದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಇರಾನ್‌ನ ದಕ್ಷಿಣ ಕರಾವಳಿ ಭಾಗಗಳನ್ನು ದ್ವಂಸಗೊಳಿಸುತ್ತಿದೆ. ಏರ್ ಡಿಫೆನ್ಸ್ ಸಿಸ್ಟಮ್ಸ್ (ವಾಯು ರಕ್ಷಣಾ ವ್ಯವಸ್ಥೆಗಳು), ಕರಾವಳಿ ಕಾವಲು ರಾಡಾರ್ ಕೇಂದ್ರಗಳು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ 60 ಕ್ಕೂ ಹೆಚ್ಚು ಸಣ್ಣ ಯುದ್ಧ ಬೋಟ್‌ಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಆಂಟಿ-ಶಿಪ್ ಕ್ರೂಸ್ ಕ್ಷಿಪಣಿ ನೆಲೆಗಳು, ಬಂದರು ನಗರಗಳಾದ ಬಂದರ್ ಅಬ್ಬಾಸ್ ಮತ್ತು ಸಿರಿಕ್ ಮೇಲೆ ದಾಳಿ ನಡೆದಿದೆ. 

Comments (0)

Your email address will not be published. Required fields are marked *

Back to top button