ಪ್ರಧಾನಿ ಮೋದಿ ಇಂಡೊನೇಷ್ಯಾ ಪ್ರವಾಸ – ಭಾರತದ ʻಬ್ರಹ್ಮೋಸ್ʼ ಖರೀದಿಗೆ ಒಪ್ಪಂದ!
Prime Minister Modi's visit to Indonesia - Agreement to buy India's ``Brahmos''!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಪ್ರವಾಸವು ಉಭಯ ದೇಶಗಳ ನಡುವಿನ ಬಾಂಧವ್ಯದಲ್ಲಿ ನವಯುಗವೊಂದಕ್ಕೆ ನಾಂದಿ ಹಾಡಿದೆ. ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಥಿಕ ವಲಯದಲ್ಲಿ ಭಾರತ ಮತ್ತು ಇಂಡೋನೇಷ್ಯಾ ಮಾಡಿಕೊಂಡಿರುವ ಮಹತ್ವದ ಒಪ್ಪಂದಗಳು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿವೆ.
ವಿಶೇಷವಾಗಿ, ರಕ್ಷಣಾ ವಲಯದಲ್ಲಿ ಭಾರತ ಕೇವಲ ಗ್ರಾಹಕ ದೇಶವಾಗಿ ಉಳಿಯದೆ, ಜಗತ್ತಿಗೆ ತಂತ್ರಜ್ಞಾನ ರಫ್ತು ಮಾಡುವ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ.
ಭಾರತದ ಇವಿಎಂ ಮಾದರಿಯತ್ತ ಇಂಡೋನೇಷ್ಯಾ ಒಲವು :
ಭಾರತದ ಬಲಿಷ್ಠ ಮತ್ತು ಯಶಸ್ವಿ ಚುನಾವಣಾ ನಿರ್ವಹಣಾ ವ್ಯವಸ್ಥೆಯನ್ನು ಇಂಡೋನೇಷ್ಯಾ ಶ್ಲಾಘಿಸಿದೆ. ತಮ್ಮ ದೇಶದ ಮುಂಬರುವ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಲು ಭಾರತದ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ತಂತ್ರಜ್ಞಾನದ ಅಗತ್ಯವಿದೆ ಎಂದು ಇಂಡೋನೇಷ್ಯಾ ಮನವಿ ಮಾಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತ, ಇಂಡೋನೇಷ್ಯಾದ ಅಗತ್ಯಕ್ಕೆ ತಕ್ಕಂತೆ ವಿಶೇಷ ಇವಿಎಂಗಳನ್ನು ಅಭಿವೃದ್ಧಿಪಡಿಸಿ ನೀಡಲು ಭರವಸೆ ನೀಡಿದೆ.
ಭಾರತದ ‘ಅಸ್ತ್ರ’ಕ್ಕೆ ಮಾರುಹೋದ ಇಂಡೋನೇಷ್ಯಾ ವಾಯುಪಡೆ :
ಭಾರತೀಯ ವಾಯುಸೇನೆಯ ಇತ್ತೀಚಿನ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಸ್ವದೇಶಿ ನಿರ್ಮಿತ ‘ಅಸ್ತ್ರ’ (Astra) ಕ್ಷಿಪಣಿಗಳ ಮಾರಕ ಸಾಮರ್ಥ್ಯವನ್ನು ಕಂಡು ಇಂಡೋನೇಷ್ಯಾ ಬೆರಗಾಗಿದೆ. ಗಾಳಿಯಿಂದ ಗಾಳಿಗೆ ಚಿಮ್ಮುವ ಈ ಕ್ಷಿಪಣಿಗಳ ಕಾರ್ಯದಕ್ಷತೆ ಗಮನಿಸಿರುವ ಇಂಡೋನೇಷ್ಯಾ, ತನ್ನ ವಾಯುಪಡೆಯ ಬಲವನ್ನು ಹೆಚ್ಚಿಸಿಕೊಳ್ಳಲು ಭಾರತದಿಂದ ‘ಅಸ್ತ್ರ’ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸಿದೆ.
‘ಬ್ರಹ್ಮೋಸ್’ ಬಲವರ್ಧನೆ :
ಈಗಾಗಲೇ ಭಾರತದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಬಳಸುತ್ತಿರುವ ಇಂಡೋನೇಷ್ಯಾ, ಇದೀಗ ತನ್ನ ದಾಸ್ತಾನನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಭಾರತವು ಇಂಡೋನೇಷ್ಯಾಕ್ಕೆ ಹೆಚ್ಚಿನ ಬ್ರಹ್ಮೋಸ್ ಕ್ಷಿಪಣಿ ಬ್ಯಾಟರಿಗಳು ಮತ್ತು ತಾಂತ್ರಿಕ ನೆರವನ್ನು ಒದಗಿಸಲು ಒಪ್ಪಿಗೆ ಸೂಚಿಸಿದೆ.




