ಸಿನಿಮಾ

ಯಶ್ ನಟನೆಯ ʻಟಾಕ್ಸಿಕ್ʼನಲ್ಲಿ ನಟಿ ಮಣಿಯರದ್ದೇ ಹವಾ​​!

Actress Mani's vibe in Yash's 'Toxic'!

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಸಿನಿಮಾ ಬಿಡುಗಡೆಗಾಗಿ ದೇಶ, ವಿದೇಶಗಳ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಚಿತ್ರದ ಹೊಸ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

‘ಟಾಕ್ಸಿಕ್’ ಚಿತ್ರದ ಟೀಸರ್‌ ಅನ್ನು ಚಿತ್ರತಂಡ ಒಟ್ಟು ಐದು ಭಾಷೆಗಳಲ್ಲಿ (ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ) ಏಕಕಾಲಕ್ಕೆ ಬಿಡುಗಡೆ ಮಾಡಿದೆ. ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೇಲಿರುವ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ.

ನಟಿಯರ ಲುಕ್ ರಿವೀಲ್!

ಈ ಬಾರಿ ಬಿಡುಗಡೆಯಾಗಿರುವ ಟೀಸರ್‌ನ ಪ್ರಮುಖ ಆಕರ್ಷಣೆಯೇ ಚಿತ್ರದಲ್ಲಿ ನಟಿಸಿರುವ ಸ್ಟಾರ್ ನಟಿಮಣಿಯರ ಖಡಕ್ ಲುಕ್. ಸ್ಯಾಂಡಲ್‌ವುಡ್‌ನ ರುಕ್ಮಿಣಿ ವಸಂತ್, ಲೇಡಿ ಸೂಪರ್ ಸ್ಟಾರ್ ನಯನತಾರಾ, ಬಾಲಿವುಡ್ ನಟಿಯರಾದ ಕಿಯಾರ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತರಿಯಾ ಅವರ ರಗಡ್ ಹಾಗೂ ಸ್ಟೈಲಿಶ್ ಲುಕ್‌ಗಳನ್ನು ಈ ಟೀಸರ್‌ನಲ್ಲಿ ಅನಾವರಣಗೊಳಿಸಲಾಗಿದೆ.

‘ಮಕ್ಕಳು ನೋಡಬೇಡಿ’ ಎಂದ ಚಿತ್ರತಂಡ!

ಈ ಟೀಸರ್ ಬಿಡುಗಡೆಯ ಬೆನ್ನಲ್ಲೇ ಚಿತ್ರತಂಡ ಪ್ರೇಕ್ಷಕರಿಗೆ ಒಂದು ಮಹತ್ವದ ಎಚ್ಚರಿಕೆಯನ್ನು ನೀಡಿದೆ. “ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ” ಎಂದು ಚಿತ್ರತಂಡ ಸೂಚನೆ ನೀಡಿದೆ. ಟೀಸರ್‌ನಲ್ಲಿರುವ ಹೈ-ವೋಲ್ಟೇಜ್ ಆಕ್ಷನ್, ವೈಲೆನ್ಸ್ ಅಥವಾ ಡಾರ್ಕ್ ಥೀಮ್‌ನ ಕಾರಣದಿಂದಾಗಿ ಈ ರೀತಿಯ ಮುನ್ನೆಚ್ಚರಿಕೆ ನೀಡಲಾಗಿದೆ ಎನ್ನಲಾಗುತ್ತಿದೆ.

ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್‌

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದೆ. ಆಗಸ್ಟ್ 26 ರಂದು ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಅತ್ಯಂತ ಅದ್ಧೂರಿಯಾಗಿ ಬೆಳ್ಳಿಪರದೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ದಿನಾಂಕವನ್ನು ಘೋಷಿಸಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಪಡೆಯುತ್ತಾ ಮುನ್ನುಗ್ಗುತ್ತಿದೆ.

Comments (0)

Your email address will not be published. Required fields are marked *

Back to top button