
ತಿರುವನಂತಪುರ: ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸರ್ಕಾರ ರಚನೆಯಾಗಿದ್ದು ವಿ.ಡಿ. ಸತೀಶನ್ ಅವರು ನೂತನ ಮುಖ್ಯಮಂತ್ರಿಯಾಗಿ ಗದ್ದುಗೆಗೇರಿದರು. ಈ ವಿನೂತನ ಸಂಪುಟದಲ್ಲಿ ಹಳೆಯ ಅನುಭವ ಮತ್ತು ಹೊಸ ಉತ್ಸಾಹದ ಸಮ್ಮಿಲನ ಕಂಡುಬಂದಿದೆ.

ನೂತನ ಸಚಿವ ಸಂಪುಟ
ವಿ.ಡಿ. ಸತೀಶನ್ ನೇತೃತ್ವದ ಸಂಪುಟದಲ್ಲಿ ಒಟ್ಟು 20 ಸಚಿವರು ಇರಲಿದ್ದು, ಈ ಪೈಕಿ 14 ಮಂದಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಮೂಡಿಸಿದೆ. ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ಹೊಂದಿರುವ ರಾಜ್ಯಪಾಲ ಆರ್.ವಿ. ಅರ್ಕ್ಲೇಕರ್ ಅವರಿಗೆ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ನೂತಸ ಸಚಿವ ಸಂಪುಟದಲ್ಲಿ 20 ಸಚಿವರು
| ಕ್ರಮ ಸಂಖ್ಯೆ | ಸಚಿವರ ಹೆಸರು | ಪಕ್ಷ |
| 1 | ವಿ.ಡಿ. ಸತೀಶನ್ (ಮುಖ್ಯಮಂತ್ರಿ) | ಕಾಂಗ್ರೆಸ್ |
| 2 | ರಮೇಶ್ ಚೆನ್ನಿತ್ತಲ | ಕಾಂಗ್ರೆಸ್ |
| 3 | ಸನ್ನಿ ಜೋಸೆಫ್ | ಕಾಂಗ್ರೆಸ್ |
| 4 | ಕೆ. ಮುರಳೀಧರನ್ | ಕಾಂಗ್ರೆಸ್ |
| 5 | ಪಿ.ಸಿ. ವಿಷ್ಣುನಾಥ್ | ಕಾಂಗ್ರೆಸ್ |
| 6 | ಎ.ಪಿ. ಅನಿಲ್ ಕುಮಾರ್ | ಕಾಂಗ್ರೆಸ್ |
| 7 | ರೋಜಿ ಎಂ. ಜಾನ್ | ಕಾಂಗ್ರೆಸ್ |
| 8 | ಟಿ. ಸಿದ್ದೀಕ್ | ಕಾಂಗ್ರೆಸ್ |
| 9 | ಬಿಂದು ಕೃಷ್ಣ | ಕಾಂಗ್ರೆಸ್ |
| 10 | ಎಂ. ಲಿಜು | ಕಾಂಗ್ರೆಸ್ |
| 11 | ಓ.ಜೆ. ಜನೀಶ್ | ಕಾಂಗ್ರೆಸ್ |
| 12 | ಕೆ.ಎ. ತುಳಸಿ | ಕಾಂಗ್ರೆಸ್ |
| 13 | ಪಿ.ಕೆ. ಕುಂಹಾಲಿಕುಟ್ಟಿ | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) |
| 14 | ಪಿ.ಕೆ. ಬಶೀರ್ | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) |
| 15 | ಕೆ.ಎಂ. ಶಾಜಿ | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) |
| 16 | ಎನ್. ಶಂಸುದ್ದೀನ್ | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) |
| 17 | ವಿ.ಇ. ಅಬ್ದುಲ್ ಗಫೂರ್ | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) |
| 18 | ಮೊನ್ಸ್ ಜೋಸೆಫ್ | ಕೇರಳ ಕಾಂಗ್ರೆಸ್ |
| 19 | ಅನೂಪ್ ಜೇಕಬ್ | ಕೇರಳ ಕಾಂಗ್ರೆಸ್ |
| 20 | ಶಿಬು ಬೇಬಿ ಜಾನ್ | ರೆವಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ |
ಮಿತ್ರಪಕ್ಷಗಳ ಪಾಲುದಾರಿಕೆ
ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಈ ಬಾರಿ 5 ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಿ.ಕೆ. ಕುನ್ಹಾಲಿಕುಟ್ಟಿ, ಕೆ.ಎಂ. ಶಾಜಿ, ವಿ. ಅಬ್ದುಲ್ ಗಫೂರ್, ಎನ್. ಶಂಸುದ್ದೀನ್ ಮತ್ತು ಪಿ.ಕೆ. ಬಶೀರ್ ಇವರು IUML ನೂತನ ಸಚಿವರುಗಳಾಗಿದ್ದಾರೆ.ಇತರ ಮಿತ್ರಪಕ್ಷಗಳಿಂದ ಕೇರಳ ಕಾಂಗ್ರೆಸ್‌ನಿಂದ ಮಾನ್ಸ್ ಜೋಸೆಫ್ ಮತ್ತು ಅನೂಪ್ ಜಾಕೋಬ್, ಆರ್‌ಎಸ್‌ಪಿಯಿಂದ ಶಿಬು ಬೇಬಿ ಜಾನ್ ಹಾಗೂ ಸಿಎಂಪಿ ಪಕ್ಷದಿಂದ ಸಿ.ಪಿ. ಜಾನ್ ಸಂಪುಟ ಸೇರಲಿದ್ದಾರೆ.
ಸರಳತೆಗೆ ಆದ್ಯತೆ- ಸತೀಶನ್ ಹೊಸ ಆದೇಶ!
ಇಂಧನ ಉಳಿತಾಯ ಮತ್ತು ಸಾರ್ವಜನಿಕ ಹಣ ಪೋಲಾಗುವುದನ್ನು ತಡೆಯಲು ನೂತನ ಸಿಎಂ ವಿ.ಡಿ. ಸತೀಶನ್ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರದ ಸಲಹೆಯಂತೆ, ಸಚಿವರ ಸಂಚಾರದ ವೇಳೆ ಯಾವುದೇ ಬೆಂಗಾವಲು ವಾಹನಗಳು, ಭದ್ರತಾ ವಾಹನಗಳು ಅಥವಾ ಆಂಬ್ಯುಲೆನ್ಸ್‌ಗಳು ಇರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ,ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಸಿಎಂ ಸುಖವಿಂದರ್ ಸುಖು,ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.
#FreedomTV #KeralaPolitics #VDSatheesan #UDFGovernment #KeralaCabinet #RahulGandhi #Congress #IUML #BreakingNews #KeralaNewCM #PoliticalUpdate




