chitradurga

ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಲವ್ ಸೆಕ್ಸ್ ಧೋಖಾ!

Love sex dhoka by RSI in Chitradurga

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ವರುಣ್ ಕುಮಾರ್ ಯುವತಿಯೋರ್ವಳ ಜೊತೆ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಏರ್ಪಡಿಸಿಕೊಂಡು ವಂಚಿಸಿರುವ ಪ್ರಕರಣ ಕೋಟೆ ನಾಡಿನಲ್ಲಿ ಸಂಚಲನ ಮೂಡಿಸಿದೆ. ಇದು ಹಿಂದಿ ಸಿನಿಮಾ ಲವ್ ಸೆಕ್ಸ್ ಔರ್ ದೋಖಾದಂತಿದೆ. ಮದುವೆಯಾಗುವುದಾಗಿ ನಂಬಿಸಿ ಅಧಿಕಾರಿ ವಂಚಿಸಿದ್ದಾರೆ ಎಂದು ಯುವತಿ ದೂರು ನೀಡಿದ ಬೆನ್ನಲ್ಲೇ, ಆರೋಪಿ ಪೊಲೀಸ್ ಅಧಿಕಾರಿ ಪ್ರತ್ಯುತ್ತರ ನೀಡಿದ್ದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ

ಆ ಒಂದು ಪ್ರೇಮ ಕಥೆ!
ದಾವಣಗೆರೆ ಮೂಲದ ಪೂರ್ಣಿಮಾ ಎಂಬ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಕೆಗೆ ಇನ್‌ಸ್ಟಾಗ್ರಾಮ್ ಮೂಲಕ ವರುಣ್ ಕುಮಾರ್ ಪರಿಚಯವಾಗಿದ್ದರು.ಕಳೆದ ಒಂದು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು ಎನ್​ನಲಾಗಿದೆ.ನಂತರ ವಿರಸದ ಸನ್ನಿವೇಶದಲ್ಲಿ ಚಿತ್ರದುರ್ಗದ ಡಿಎಆರ್ (DAR) ವಿಭಾಗದ ಆರ್‌ಎಸ್‌ಐ (RSI) ವರುಣ್ ಕುಮಾರ್ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

RSI ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ.ಬಳಿಕ ಗರ್ಭಿಣಿಯಾದಾಗ ತನಗೆ ತಿಳಿಯದಂತೆ ಗರ್ಭಪಾತ ಮಾಡಿಸಿದ್ದು ಈಗ ಮದುವೆಯಾಗಲು ನಿರಾಕರಿಸಿ ವಂಚಿಸುತ್ತಿದ್ದಾರೆ.ಎಂದು ಸಂತ್ರಸ್ತೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರುಣ್ ಕುಮಾರ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

RSI ಯು-ಟರ್ನ್
ಯುವತಿಯ ದೂರಿನ ಬೆನ್ನಲ್ಲೇ ಆರ್‌ಎಸ್‌ಐ ವರುಣ್ ಕುಮಾರ್ ಅವರು ಸಂತ್ರಸ್ತೆಯ ವಿರುದ್ಧವೇ ಸ್ಫೋಟಕ ಸಾಕ್ಷ್ಯಗಳನ್ನು ಹೊರಹಾಕಿದ್ದಾರೆ. ಪೂರ್ಣಿಮಾಗೆ ಮೊದಲೇ ಮದುವೆಯಾಗಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.ಪೂರ್ಣಿಮಾ ಅವರ ಕೊರಳಲ್ಲಿ ತಾಳಿ ಇರುವ ಮತ್ತು ಪಕ್ಕದಲ್ಲಿ ಮಗು ಇರುವ ಫೋಟೋಗಳನ್ನು ವರುಣ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಯುವತಿ ಮೊದಲೇ ವಿವಾಹಿತೆಯಾಗಿದ್ದು, ಈ ವಿಚಾರವನ್ನು ಮರೆಮಾಚಿ ತನ್ನನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಪೊಲೀಸ್ ಅಧಿಕಾರಿ ಮಾಡಿದ್ದಾರೆ.

ಯುವತಿಯು ಮದುವೆಯಾದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ಯಾರು ಯಾರಿಗೆ ವಂಚಿಸಿದ್ದಾರೆ?” ಎಂಬ ಪ್ರಶ್ನೆ ಸಾರ್ವಜನಿಕರನ್ನು ಪೇಚೆಗೆ ಸಿಲುಕಿಸಿದೆ. ಸದ್ಯ ಮಹಿಳಾ ಠಾಣೆ ಪೊಲೀಸರು ಇಬ್ಬರ ಹೇಳಿಕೆಗಳನ್ನು ಪಡೆದುಕೊಂಡು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.ಈ ಲವ್ ಸ್ಟೋರಿ ಯಾವ ರೀತಿಯ ತಿರುವು ಪಡೆಯುತ್ತದೆಯೋ ಕಾದು ನೋಡಬೇಕಿದೆ.

#Chitradurga #PoliceCase #RSIVarunKumar #Davanagere #LoveAndCheating #CrimeNews #KarnatakaPolice #ViralPhoto #FreedomTV #TrendingNews #FIR #SocialMediaHoneytrap

Comments (0)

Your email address will not be published. Required fields are marked *

Back to top button