
ಇರಾನ್: ಸುಮಾರು 289 ಕೋಟಿ ರೂ. ಮೌಲ್ಯದ ಯುಎಸ್ ಎಫ್ -15 ಇ ಸ್ಟ್ರೈಕ್ ಈಗಲ್ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು ಹೊಂದಿರುತ್ತದೆ. ಎ-10 ವಾರ್ಥಾಗ್ ಯುದ್ಧ ವಿಮಾನವು ಸುಮಾರು 174 ಕೋಟಿ ರೂ. ವೆಚ್ಚದ್ದಾಗಿದೆ. ಇರಾಕ್ ಮೇಲೆ ಅಮೆರಿಕ 2003ರಲ್ಲಿ ಆಕ್ರಮಣ ಮಾಡಿದ ಸಂದರ್ಭದಲ್ಲಿ ಕೊನೆಯ ಬಾರಿಗೆ ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿತ್ತು.
ಇರಾನ್ ದಾಳಿಯ ವೇಳೆ ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಕೂಡ ಬಿದ್ದಿದ್ದು, ನಾಪತ್ತೆಯಾಗಿರುವ ಪೈಲಟ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆತ ಇರಾನಿನ ವಾಯುಪ್ರದೇಶದಿಂದ ಹೊರಬಂದಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ದಾಳಿಯಿಂದ ಪತನಗೊಂಡ ವಿಮಾನದ ಬಗ್ಗೆ ಶ್ವೇತಭವನ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್, ಎಫ್ -15 ಯುದ್ಧ ವಿಮಾನ ನಷ್ಟವು ಇರಾನ್‌ನೊಂದಿಗಿನ ಮಾತುಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಯುದ್ಧ ಎಂದರು.




