ರಾಜಕೀಯರಾಜ್ಯಸುದ್ದಿ

ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಮುಕ್ತ ವಿವಿ ಬೆಂಬಲವಿಲ್ಲ..!

ರಾಜ್ಯ ಮುಕ್ತ ವಿವಿ ಸಹಯೋಗ ಮತ್ತು ಹಣಕಾಸಿನ ನೆರವಿನೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ರಾಜ್ಯ ಮುಕ್ತ ವಿವಿ ಉದ್ದೇಶಕ್ಕೆ ಸಂಬಂಧ ಇಲ್ಲದ ಅಧಿವೇಶನ ಇದು. ಇದನ್ನು ರದ್ದು ಮಾಡಿ ಎಂದು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದರು. ಆದೇಶದ ಬೆನ್ನಲ್ಲೇ ಕಾರ್ಯಕ್ರಮದ ಸಹಯೋಗದಿಂದ ವಿವಿ ಹೊರಬಂದಿದೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನೆನಪಿನ ಶೈಕ್ಷಣಿಕ ಕಾರ್ಯಕ್ರಮ ಇದಾಗಿತ್ತು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನಸಂಘದ ಅತಿ ಪ್ರಮುಖ ನಾಯಕರು. ಮೈಸೂರಿನ ರಾಜ್ಯ ಮುಕ್ತ ವಿವಿಯಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಶೈಕ್ಷಣಿಕ ಅಧಿವೇಶನ ಆಯೋಜಿಸಲಾಗಿತ್ತು.

ಆರ್‌ಎಸ್‌ಎಸ್ ಸಂಘಟನೆಯ ಜೊತೆ ಇರುವ ಪ್ರಜ್ಞಾ ಪ್ರವಾಹ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಫೌಂಡೇಶನ್‌ನಿಂದ ಮಾತ್ರ ಈಗ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button