ರಾಜ್ಯಸಿನಿಮಾಸುದ್ದಿ

“ಸರ್ಸೆ ಸರ್ಸೆ ಸೆರಗ ಸರ್ಸೆ” ಹಾಡಿನ ವಿವಾದ: ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ

ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಕೆಡಿ-ದ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಸೆರಗ ಸರ್ಸೆ ಹಾಡಿನ ವಿಚಾರದಲ್ಲಿ ಮಹಿಳಾ ಆಯೋಗವು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಪತ್ರ ಬರೆದಿದೆ. ಪತ್ರದಲ್ಲಿ ಈ ಹಾಡು ಅಶ್ಲೀಲವಾಗಿದ್ದು, ಮಹಿಳೆಯರ ಘನತೆಗೆ ಕುತ್ತು ಕೊಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಈ ಹಾಡು ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಅದರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ, ದೆಹಲಿಯ ಸೈಬರ್ ಸೆಲ್‌ಗೆ ಈ ಹಾಡಿನ ವಿರುದ್ಧ ದೂರು ದಾಖಲಾಗಿದ್ದು, ನಂತರ ಹಿಂದಿ ಹಾಡನ್ನು ಯೂಟ್ಯೂಬ್‌ನಲ್ಲಿ ಕೆವಿಎಲ್ ಪ್ರೊಡಕ್ಷನ್ ತೆಗೆದುಹಾಕಿದೆ.

ಹಿಂದಿ ಸಂಸ್ಕರಣೆಯಲ್ಲಿ ‘ಸರ್ಕೆ ಚುನಾರ್’ ಎಂದು ಆರಂಭವಾಗುವ ಈ ಹಾಡಿನ ಅಶ್ಲೀಲ ಮತ್ತು ಅಸಭ್ಯ ವಿಷಯಕ್ಕೆ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ದೆಹಲಿ ಸೈಬರ್ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ನಟಿ ನೋರಾ ಫತೇಹಿ, ಸಂಜಯ್ ದತ್, ಹಿಂದಿ ಗೀತಾರಚನೆಕಾರ ರಕೀಬ್ ಆಲಂ ಮತ್ತು ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಚಿತ್ರತಂಡಕ್ಕೆ ನೋಟಿಸ್ ಜಾರಿಮಾಡಿದೆ.

Comments (0)

Your email address will not be published. Required fields are marked *

Back to top button