#Exclusive NewsTop Newsರಾಜಕೀಯರಾಜ್ಯಸುದ್ದಿ

ಕೈ ಪಡೆಯಲ್ಲಿ ಡಿನ್ನರ್ ವಾರ್; ‘ಬಂಡೆ’ಗೆ ಟಕ್ಕರ್ ಕೊಡಲು ‘ಟಗರು’ ಸಜ್ಜು?

ಕರ್ನಾಟಕ ರಾಜಕಾರಣದ “ಟಗರು” ಮತ್ತು “ಕನಕಪುರ ಬಂಡೆ” ಎಂದೇ ಖ್ಯಾತರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಈಗ ‘ಡಿನ್ನರ್ ಪಾಲಿಟಿಕ್ಸ್’ ಶುರುವಾದಂತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಆರು ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಮಾರ್ಚ್ 10ರಂದು ಡಿ.ಕೆ. ಶಿವಕುಮಾರ್ ಅವರು ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಆದರೆ, ಇದಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 9ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಶೋಕ ಹೋಟೆಲ್‌ನಲ್ಲಿ ಶಾಸಕರಿಗಾಗಿ ಭರ್ಜರಿ ಡಿನ್ನರ್ ಪಾರ್ಟಿ ಕರೆದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಒಂದೆಡೆ ಡಿ.ಕೆ. ಶಿವಕುಮಾರ್ ತಮ್ಮ ನಾಯಕತ್ವದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದ್ದರೆ, ಅದಕ್ಕಿಂತ ಮೊದಲೇ ಸಿಎಂ ಸಿದ್ದರಾಮಯ್ಯ ಔತಣಕೂಟ ಆಯೋಜಿಸಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಮಾರ್ಚ್ 11ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಅದರ ಮುನ್ನಾದಿನವೇ ಸಿಎಂ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಪ್ಲಾನ್ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಡಿಕೆಶಿ ಅವರ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದಲೇ ಸಿಎಂ ಈ ನಡೆ ಇಟ್ಟಿದ್ದಾರಾ ಎಂಬ ಪ್ರಶ್ನೆ ಈಗ ಕೈ ಪಡೆಯಲ್ಲಿ ಸದ್ದು ಮಾಡುತ್ತಿದೆ.

ಒಟ್ಟಾರೆಯಾಗಿ ಕಾಂಗ್ರೆಸ್ ಪಡೆಯಲ್ಲಿ ಸರಣಿ ಔತಣಕೂಟಗಳ ಆಯೋಜನೆಯಾಗುತ್ತಿದ್ದು, ಅಧಿಕಾರ ಹಂಚಿಕೆ ಅಥವಾ ನಾಯಕತ್ವದ ಪೈಪೋಟಿಯ ನಡುವೆ ಈ “ಊಟದ ರಾಜಕೀಯ” ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ. ಶಾಸಕರ ಬೆಂಬಲ ಯಾರ ಪರವಾಗಿದೆ ಎಂಬುದನ್ನು ಈ ಡಿನ್ನರ್ ಪಾರ್ಟಿಗಳ ಹಾಜರಾತಿಯೇ ನಿರ್ಧರಿಸುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button