ರಾಜಕೀಯರಾಜ್ಯಸುದ್ದಿ

ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಹೊಟ್ಟೆಕಿಚ್ಚು; ಸಿದ್ದರಾಮಯ್ಯ ಖಡಕ್ ಸವಾಲು!

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ವಿರೋಧಿಗಳ ವಿರುದ್ಧ ಅತ್ಯಂತ ಕಠಿಣವಾಗಿ ಗುಡುಗಿದ್ದಾರೆ.

ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನವು ಎಂದಿಗೂ ಹೂವಿನ ಹಾಸಿಗೆಯಾಗಿರದೆ ಕಲ್ಲು-ಮುಳ್ಳುಗಳಿಂದ ಕೂಡಿದ ಹಾದಿಯಾಗಿತ್ತು ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿಯಾಗಿ ಆರ್ಥಿಕ ತಜ್ಞರಿಗೆ ಸರಿಸಮನಾಗಿ ಬಜೆಟ್ ಮಂಡಿಸುತ್ತಿರುವುದನ್ನು ಕಂಡು ಪಟ್ಟಭದ್ರ ಹಿತಾಸಕ್ತಿಗಳು ಅಸಹನೆ ಮತ್ತು ದ್ವೇಷದಿಂದ ಕುದಿಯುತ್ತಿವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರಂತಹ ಸಾಮಾಜಿಕ ಪರಿವರ್ತಕರಿಗೂ ಇತಿಹಾಸದಲ್ಲಿ ಇಂತಹದ್ದೇ ಷಡ್ಯಂತ್ರಗಳು ಎದುರಾಗಿದ್ದವು ಸಿಎಂ, ರಾಹುಲ್ ಗಾಂಧಿಯವರು ಯಾವಾಗ ಸಾಮಾಜಿಕ ನ್ಯಾಯ ಮತ್ತು ಜಾತಿಗಣತಿಯ ಬಗ್ಗೆ ದನಿ ಎತ್ತಲು ಶುರು ಮಾಡಿದರೋ ಅಂದಿನಿಂದ ಅವರ ವಿರುದ್ಧವೂ ಸಂಚು ನಡೆಯುತ್ತಿದೆ, ಪ್ರಸ್ತುತ ತಮ್ಮ ವಿರುದ್ಧ ನಡೆಯುತ್ತಿರುವ ಆರೋಪಗಳು ಕೇವಲ ವೈಯಕ್ತಿಕ ದಾಳಿಯಲ್ಲದೆ ತಮ್ಮನ್ನು ನಂಬಿರುವ ಜನರ ವಿರುದ್ಧದ ಸಂಚಾಗಿದ್ದು, ತಾವು ಎಂದಿಗೂ ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿಯಾಗಲಾರೆ ಮತ್ತು ತಮ್ಮ ಉಸಿರಿರುವವರೆಗೂ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದಾಗಿ ವಿರೋಧಿಗಳಿಗೆ ನೇರ ಸವಾಲು ಎಸೆದಿದ್ದಾರೆ.

Comments (0)

Your email address will not be published. Required fields are marked *

Back to top button