Freedom TV

ಮುರಿದು ಬೀಳುತ್ತಾ ದಳ – ಕಮಲ ಮೈತ್ರಿ ? ನಿಖಿಲ್​​ ಕುಮಾರಸ್ವಾಮಿ ಏನಂತಾರೆ?

ಬೆಂಗಳೂರು: ಜಿಬಿಎ ಚುನಾವಣೆಯಲ್ಲಿ ದಳ – ಕಮಲ ಮೈತ್ರಿ ಮುರಿದು ಬೀಳುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಇದೇ ವಿಚಾರಕ್ಕೆ ಜೆಡಿಎಸ್​​ ಯುವಘಟಕದ ಅಧ್ಯಕ್ಷ ನಿಖಿಲ್​​ ಕುಮಾರಸ್ವಾಮಿ ಪ್ರತಿಕ್ರಿಸಿದ್ದಾರೆ..

ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ಅವರು, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​​​​​​​ ಮೈತ್ರಿ ಆಗುವ ಬಗ್ಗೆ ದೆಹಲಿಯಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದ್ದಾರೆ.. 2015 ರಿಂದ ಬಿಬಿಎಂಪಿ ಚುನಾವಣೆ ಆಗಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದನ್ವಯ ಚುನಾವಣೆ ಮಾಡಬೇಕು.

ಈ ಸರ್ಕಾರಕ್ಕೆ ಚುನಾವಣೆ ಮಾಡೋಕೆ ಭಯ. 2.5 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನ ಕಾಂಗ್ರೆಸ್ ಅವರನ್ನ ತಿರಸ್ಕಾರ ಮಾಡ್ತಾರೆ ಅನ್ನೋ ಭಯದಲ್ಲಿ ಚುನಾವಣೆ ಮಾಡೋಕೆ ಹಿಂದೇಟು ಹಾಕಿದ್ರು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿರೋದ್ರಿಂದ ಚುನಾವಣೆ ಆಗ್ತಿದೆ. ಜಿಬಿಎ ಚುನಾವಣೆ ಏಕಾಂಗಿಯಾಗಿ ಎದುರಿಸೋಣ ಅಂತ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಿದೆ.

GBA, ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕರ್ತರ ಚುನಾವಣೆ. ಆಕಾಂಕ್ಷಿಗಳು ಜಾಸ್ತಿ ‌ಇರ್ತಾರೆ. ಹೊಸ ನಾಯಕತ್ವ ಹುಟ್ಟಿ ಹಾಕೋಕೆ ಸುವರ್ಣ ಅವಕಾಶ ಇದೆ ಅನ್ನೋದು ಎಲ್ಲರ ಅಭಿಪ್ರಾಯ. ದೇವೇಗೌಡರ ಬಳಿ ಇದರ ಬಗ್ಗೆ ತಿಳಿಸಲಾಗಿದೆ ಎಂದರು.

ಜಿಬಿಎ-ಸ್ಥಳೀಯ ಸಂಸ್ಥೆಗಳ ಚುನಾವಣೆ ಒಟ್ಟಾಗಿ ಹೋಗಬೇಕಾ ಬೇಡವಾ ಅಂತ ತೀರ್ಮಾನ ಮಾಡೋದು ದೇವೇಗೌಡ, ಕುಮಾರಸ್ವಾಮಿ, ಮೋದಿ, ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿ ಒಪ್ಪಂದ ಆಗಬೇಕು. ಬಿಜೆಪಿ ಕೇಂದ್ರದ ನಾಯಕರ ಜೊತೆ ಕೂತು ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡ್ತೀವಿ ಎಂದರು. ಇನ್ನು ಲೋಕಸಭೆ ಚುನಾವಣೆಯಲ್ಲಿ NDA ಗೆ ಉತ್ತಮ ಫಲಿತಾಂಶ ಬಂದಿದೆ. ರಾಜ್ಯದ ಜನತೆ NDAಯನ್ನ ಒಪ್ಪಿ ಹೆಚ್ಚು ಸ್ಥಾನ ಲೋಕಸಭೆಯಲ್ಲಿ ಕೊಟ್ಟಿದ್ದಾರೆ. ಜೆಡಿಎಸ್ NDA ಮಿತ್ರ ಕೂಟವಾಗಿ ಕೆಲಸ ಮಾಡ್ತಿದೆ. ನಮ್ಮ ದೇಶ, ರಾಜ್ಯ ಕಟ್ಟೋಕೆ ಕೆಲಸ ಮಾಡ್ತೀವಿ ಎಂದರು.

Comments (0)

Your email address will not be published. Required fields are marked *

Back to top button