ದೇಶ/ವಿದೇಶಸಿನಿಮಾಸುದ್ದಿ

ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕತ್ರಿನಾ ಕೈಫ್

ಬಾಲಿವುಡ್ಸ್ಟಾರ್ನಟರಾದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ದಂಪತಿಗೆ ಗಂಡು ಮಗುವಿನ ಆಗಮನವಾಗದೆ.. ಸಂತೋಷದ ಸುದ್ದಿಯನ್ನು ಇನ್‌ಸ್ಟಾಗ್ರಾಂ ಮೂಲಕ ಇಬ್ಬರೂ ತಮ್ಮ ಪುಟ್ಟ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ತಾರಾ ದಂಪತಿ ಇದೀಗ ಗಂಡು ಮಗುವನ್ನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಕತ್ರಿನಾ ಕೈಫ್ ತಮ್ಮ ಪೋಸ್ಟ್‌ನಲ್ಲಿ ನಮ್ಮ ಜೀವನದಲ್ಲಿ ದೇವರ ಆಶೀರ್ವಾದವಾಗಿ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದಿದ್ದಾರೆ. ಈ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಅವರ ಪತಿ ವಿಕ್ಕಿ ಕೌಶಲ್ ಕೂಡ ಇದೇ ಸಂದೇಶವನ್ನು ತಮ್ಮ ಖಾತೆಯಿಂದ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದಂಪತಿಗೆ ಶುಭಾಶಯಗಳ ಮಳೆ ಸುರಿಯಿತು. ಬಾಲಿವುಡ್‌ನ ಅನೇಕ ತಾರೆಯರು, ನಿರ್ದೇಶಕರು, ಹಾಗೂ ಅಭಿಮಾನಿಗಳು ಇಬ್ಬರಿಗೂ ಶುಭ ಹಾರೈಸಿದರು. ಕಳೆದ ಸೆಪ್ಟೆಂಬರ್ 23ರಂದು ವಿಕ್ಕಿಕತ್ರಿನಾ ದಂಪತಿಗಳು ತಾವು ಪೋಷಕರಾಗುವುದಾಗಿ ಘೋಷಿಸಿದ್ದರು. ಅದಾದ ನಂತರ ಕತ್ರಿನಾ ಚಿತ್ರರಂಗದಿಂದ ಕೆಲವು ಕಾಲ ವಿಶ್ರಾಂತಿ ತೆಗೆದುಕೊಂಡು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರು.

Comments (0)

Your email address will not be published. Required fields are marked *

Back to top button