ಲೈಫ್ ಸ್ಟೈಲ್ವಾಣಿಜ್ಯ

ಇಲ್ಲಿ 12 ಮೊಟ್ಟೆಗೆ 200ರೂ ಕೆಜಿ ಈರುಳ್ಳಿ 250..ಚಿಕನ್ 615..!

ಲಾಹೋರ್ : ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದ್ದು, ಪಂಜಾಬ್ ನ ಪ್ರಾಂತ್ಯ ರಾಜಧಾನಿ ಲಾಹೋರ್ ನಲ್ಲಿ 12 ಮೊಟ್ಟೆ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ. ಸರ್ಕಾರಿ ಬೆಲೆಪಟ್ಟಿಯನ್ನು ಜಾರಿಗೊಳಿಸಲು ಸ್ಥಳೀಯ ಆಡಳಿತ ವಿಫಲವಾದ ಬೆನ್ನಲ್ಲೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಈರುಳ್ಳಿ ದರ ಪ್ರತಿ ಕೆಜಿಗೆ 230 ರಿಂದ 250 ಆಗಿದ್ದು, ಸರ್ಕಾರ ನಿಗದಿಪಡಿಸಿದ ದರ ಪ್ರತಿ ಕೆ.ಜಿ.ಗೆ 175 ರೂಪಾಯಿ. ಲಾಹೋರ್ನಲ್ಲಿ ಮೊಟ್ಟೆ ದರ ಡಜನ್ಗೆ 400 ರೂಪಾಯಿ ಆಗಿದ್ದರೆ ಚಿಕನ್ ದರ ಕೆ.ಜಿ.ಗೆ 615 ರೂಪಾಯಿಯನ್ನು ತಲುಪಿದೆ.

ಮುಕ್ತ ಮಾರುಕಟ್ಟೆಯಲ್ಲಿ ಬೆಲೆಸ್ಥಿರತೆಯನ್ನು ಸಾಧಿಸುವ ದೃಷ್ಟಿಯಿಂದ ಹಾಗೂ ಅಕ್ರಮವಾಗಿ ಆಹಾರವಸ್ತುಗಳ ದಾಸ್ತಾನು ಹಾಗೂ ಲಾಭಕೋರ ನೀತಿಯನ್ನು ತಡೆಯುವ ದೃಷ್ಟಿಯಿಂದ ಸ್ಥಳೀಯ ಸರ್ಕಾರಗಳ ಜತೆ ಸಮನ್ವಯದಿಂದ ಬೆಲೆ ನಿಯಂತ್ರಣ ಮಾಡುವಂತೆ ನ್ಯಾಷನಲ್ ಪ್ರೈಸ್ ಮಾನಿಟರಿಂಗ್ ಕಮಿಟಿಗೆ ಆರ್ಥಿಕ ಸಮನ್ವಯ ಸಮಿತಿ ಕಳೆದ ತಿಂಗಳು ಸೂಚನೆ ನೀಡಿತ್ತು. ಸಂಪುಟ ಸಮಿತಿಯ ನೇತೃತ್ವವನ್ನು ಹಣಕಾಸು, ಕಂದಾಯ ಮತ್ತು ಆರ್ಥಿಕ ವ್ಯವಹಾರಗಳ ಖಾತೆ ಉಸ್ತುವಾರಿ ಸಚಿವ ಶಂಶದ್ ಅಖ್ತರ್ ವಹಿಸಿದ್ದರು.

ಏತನ್ಮಧ್ಯೆ ಕಳೆದ ನವೆಂಬರ್ ವೇಳೆಗೆ ಪಾಕಿಸ್ತಾನದ ಮೇಲಿನ ಸಾಲದ ಹೊರೆ 63,339 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗೆ ಹೆಚ್ಚಿದೆ ಎಂದು ವರದಿಯಾಗಿದೆ. ಪಿಡಿಎಂ ಹಾಗೂ ಉಸ್ತುವಾರಿ ಸರ್ಕಾರದ ಅಧಿಕಾರಾವಧಿಯಲ್ಲಿ ಒಟ್ಟು ಸಾಲದ ಹೊರೆ 12.430 ಪಿಕೆಆರ್ನಷ್ಟು ಹೆಚ್ಚಿದೆ. ಒಟ್ಟಾರೆ ಸಾಲದ ಹೊರೆ 63.390 ಟ್ರಿಲಿಯನ್ಗೆ ಹೆಚ್ಚಿದ್ದು, ಇದರಲ್ಲಿ 40.956 ಟ್ರಿಲಿಯನ್ ದೇಶೀಯ ಸಾಲ ಮತ್ತು 22.434 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿ ಅಂತರರಾಷ್ಟ್ರೀಯ ಸಾಲ ಸೇರಿದೆ. ಒಟ್ನಲ್ಲಿ ಸುಖಸುಮ್ಮನೆ ಭಾರತದ ಮೇಲೆ ಮುರಿದುಕೊಂಡು ಬೀಳುವ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದ್ದು, ದಾರಿದ್ರ್ಯತೆ ತಾಂಡವಾಡುತ್ತಿದೆ. ಆದ್ರೂ ಜಟ್ಟಿ ಕೆಳಗೆ ಬಿದ್ರು ಮೀಸೆ ಮಣ್ಣಗಲಿಲ್ಲ ಎಂಬ ಗಾದೆಯಂತೆ, ಪಾಕ್ ವರ್ತಿಸುತ್ತಲೇ ಇದೆ.

Comments (0)

Your email address will not be published. Required fields are marked *

Back to top button