
ಮಲಯಾಳಂ ಸ್ಟಾರ್ ನಟ, ನಿರ್ಮಾಪಕರಾದ ದುಲ್ಕರ್ ಸಲ್ಮಾನ್, ಅವರಿಗೆ ಕಸ್ಟಮ್ಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ..
ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಗಣ್ಯರು ಖರೀದಿಸಿದ್ದ ವಿದೇಶಿ ಕಾರುಗಳ ತೆರಿಗೆ ವಿಚಾರಕ್ಕೆ ಸಂಬಂಧಿಸಿ ಕೇರಳ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಮಾಲಿವುಡ್ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸುಮಾರು 30 ಸ್ಥಳಗಳ ಮೇಲೆ ಕೇರಳ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದು, ಈ ದಾಳಿಗೆ ‘ನುಮ್ಮೂರ್’ ಎನ್ನುವ ಹೆಸರು ಇಡಲಾಗಿದೆ. ನಿಯಮಬಾಹಿರವಾಗಿ ಹೊರದೇಶಗಳಿಂದ ಕಾರುಗಳನ್ನು ಖರೀದಿ ಖರೀದಿ ಮಾಡಿದವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ದಾಳಿಯನ್ನು ನಡೆಸಲಾಗಿದೆ.
ಇದೇ ವೇಳೆ ಹಲವು ವಿದೇಶಿ ಕಾರಗಳನ್ನು ಹೊಂದಿರುವ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೂ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ಕಾರಿನ ದಾಖಲೆಯನ್ನು ಪರಿಶೀಲಿಸಿದ್ದರು. ಲ್ಕರ್ ಸಲ್ಮಾನ್ ಅವರ ಮನೆಯಲ್ಲಿದ್ದ ಎರಡು ಕಾರುಗಳನ್ನು ಅಧಿಕಾರಿಗಳನ್ನು ಸೀಜ್ ಮಾಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಸ್ಟಮ್ಸ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.




