
ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪ್ರತಿಷ್ಠಿತ ರೆಸ್ಟೋರೆಂಟ್ ಬಾಸ್ಟಿಯನ್ ಅನ್ನು ಮುಚ್ಚಲು ನಿರ್ಧರಿಸಿದ್ದಾರೆ.. ಮುಂಬೈನ ಬಾಂದ್ರಾದಲ್ಲಿರುವ ಬಾಸ್ಟಿಯನ್ ರೆಸ್ಟೋರೆಂಟ್ ಅನ್ನು ಮುಚ್ಚಲು ನಿರ್ಧರಿಸಿದ್ದು, ಈ ಬಗ್ಗೆ ಇನ್ಸ್ ಟಗ್ರಾಮ್ ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ. ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ.
ಈ ಗುರುವಾರ ಮುಂಬೈನ ಅತ್ಯಂತ ಐಕಾನಿಕ್ ತಾಣಗಳಲ್ಲಿ ಒಂದಾದ ಬಾಸ್ಟಿಯನ್ ಬಾಂದ್ರಾಕ್ಕೆ ನಾವು ವಿದಾಯ ಹೇಳುತ್ತಿದ್ದೇವೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ನಮಗೆ ಲೆಕ್ಕವಿಲ್ಲದಷ್ಟು ನೆನಪುಗಳು, ಮರೆಯಲಾಗದ ರಾತ್ರಿಗಳು ಮತ್ತು ನಗರದ ರಾತ್ರಿಜೀವನವನ್ನು ರೂಪಿಸಿದ ಕ್ಷಣಗಳನ್ನು ನೀಡಿದ ಸ್ಥಳವು ಈಗ ತನ್ನ ಅಂತಿಮ ಕ್ಷಣದಲ್ಲಿದೆ ಎಂದು ಅವರು ಬರೆದಿದ್ದಾರೆ.
ಇನ್ನು ಶಿಲ್ಪಾ ಶೆಟ್ಟಿ ಮತ್ತು ಅವರ ಕುಟುಂಬವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಂತೆ ಕಾಣುತ್ತಿದೆ. ಈ ಹಿಂದೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಸಿನಿಮಾ ತಯಾರಿಸಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ ಆರೋಪ ಕೇಳಿ ಬಂದಿತ್ತು.
ಇತ್ತೀಚೆಗೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ದೀಪಕ್ ಕೊತ್ತಾರಿ ಎಂಬುವವರು 60 ಕೋಟಿ ರೂಪಾಯಿ ಹಣವನ್ನು ಲೋನ್ ಕಮ್ ಇನ್ ವೆಸ್ಟಮೆಂಟ್ ರೂಪದಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಎಕನಾಮಿಕ್ ಅಫೇನ್ಸ್ ವಿಂಗ್ ರಾಜ್ ಕುಂದ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆದರೇ, ಈ ಆರೋಪಗಳೆಲ್ಲಾ ಆಧಾರ ರಹಿತ ಎಂದು ರಾಜ್ ಕುಂದ್ರಾ ಪರ ವಕೀಲರು ಹೇಳಿದ್ದರು. ಇದೊಂದು ಸಿವಿಲ್ ಕೇಸ್ ಎಂದು ವಕೀಲರು ಹೇಳಿದ್ದರು.




