Top Newsರಾಜಕೀಯರಾಜ್ಯ

ಶಾಸಕ ವೀರೇಂದ್ರ ಪಪ್ಪಿ ಬಂಧನ; ಇಡಿ ದಾಳಿ ವೇಳೆ ಕೋಟಿ.. ಕೋಟಿ ನಗದು ಪತ್ತೆ..!

ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್​ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಇಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆನ್​ಲೈನ್​ ಮತ್ತು ಆಫ್​ ಲೈನ್​ ಬೆಟ್ಟಿಂಗ್​ ಪ್ರಕರಣದ ವಿಚಾರವಾಗಿ ದಾಳಿ ಮಾಡಿದ್ದು, ಇದೀಗ ಅವರನ್ನು ಬಂಧಿಸಿದ್ದಾರೆ.

ಸತತ 18 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ ಇಡಿ ಅಧಿಕಾರಿಗಳು ವೀರೇಂದ್ರ  ಪಪ್ಪಿ ಮನೆಯಲ್ಲಿ ಕೋಟ್ಯಾಂತರ ರೂ. ನಗದು, ವಿದೇಶ ಕರೆನ್ಸಿ ಸೇರಿದಂತೆ ಚಿನ್ನಾಭರಣ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸಕ್ಕೆ ನಿನ್ನೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿ ವಿಚಾರಣೆ ಅಂತ್ಯಗೊಳಿಸಿದ್ದಾರೆ. ದಾಳಿ ವೇಳೆ  1 ಕೋಟಿ ವಿದೇಶಿ ಕರೆನ್ಸಿ ಸೇರಿದಂತೆ ಸಮಾರು 12 ಕೋಟಿ ರೂ ನಗದು ಪತ್ತೆ ಆಗಿದೆ. 6 ಕೋಟಿ ಮೌಲ್ಯದ ಚಿನ್ನ ಸಮಾರು 10 ಕೆ.ಜಿ ಬೆಳ್ಳಿ, 4 ವಾಹನಗಳು, ಸೇರಿದಂತೆ 17 ಬ್ಯಾಂಕ್ ಅಕೌಂಟ್ಸ್​​ ಮತ್ತು 2 ಲಾಕರ್​ ಜಪ್ತಿ ಮಾಡಿದ್ದಾರೆ.

ಕೆ.ಸಿ ವೀರೇಂದ್ರ ಪಪ್ಪಿಯನ್ನು ಸಿಕ್ಕಿಂನ  ಗ್ಯಾಂಗ್​ಟಾಕ್​ನಲ್ಲಿ ಬಂಧಿಸಿರುವ ಪೊಲೀಸರು ಸಿಕ್ಕಿಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಟ್ರಾನ್ಸಿಟ್​​ ವಾರೆಂಟ್​ ಮೇಲೆ ಇಂದು ರಾತ್ರಿ ಬೆಂಗಳೂರಿಗೆ ಇಡಿ ಅಧಿಕಾರಿಗಳು ಕರೆತರಲಿದ್ದಾರೆ..

Comments (0)

Your email address will not be published. Required fields are marked *

Back to top button