ಕ್ರೈಂ ಸ್ಟೋರಿ

ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಇಬ್ಬರು ಹಂತಕರ ಬಂಧನ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗುಡ್ಡಗಾಡು ಪ್ರದೇಶದಲ್ಲಿ, ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ಮೃತದೇಹ ಪ್ರಕರಣ ಭೇದಿಸುವಲ್ಲಿ ಕಲಬುರಗಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಗಣಿಯಾರ ತಾಂಡಾ ಮೂಲದ ದೇವಿಬಾಯಿ ಕೊಲೆಯಾದ ಮಹಿಳೆಯಾಗಿದ್ದು, ಅದೇ ಗ್ರಾಮದ ಸೋಮ್ಲಾ ಹಾಗೂ ಪಪ್ಪು ರಾಠೋಡ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸೋಮ್ಲಾ ಹಾಗೂ ದೇವಿಬಾಯಿ ಲೀವಿಂಗ್ ಟೂಗೆದರ್ ರಿಲೇಷನ್ ಶಿಪ್ ನಲ್ಲಿದ್ರು. ಮಗಳ ಮದುವೆ ವಿಚಾರಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಮಹಿಳೆಯನ್ನು ಕೊಂದ ದುಷ್ಕರ್ಮಿಗಳು ಮೃತದೇಹವನ್ನು ಹೊಂಡೈ ವೆನ್ಯೂ ಕಾರ್ ನಲ್ಲಿ ಲಾಡ್ಲಾಪುರದ ಗುಡ್ಡದ ಬಳಿಯ ನಿರ್ಜನ ಪ್ರದೇಶದಲ್ಲಿ ಪೇಟ್ರೋಲ್ ಹಾಕಿ ಸುಟ್ಟು ಹಾಕಿದ್ದರು.

ಇನ್ನು ಬಂಧಿತರಿಂದ ಒಂದು ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button