Top Newsರಾಜಕೀಯ

ಕಾಲ್ತುಳಿತ ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ – ಪ್ರಲ್ಹಾದ್ ಜೋಶಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಘನಘೋರ ದುರಂತಕ್ಕೆ, ಸರ್ಕಾರದ ಬೇಜವಾಬ್ದಾರಿಯೇ ಕಾರಣ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.ಇದು ಸಿದ್ಧ ಸತ್ಯ. ಕೋರ್ಟ್‌ನಲ್ಲಿ ಇದು ಸಾಬೀತಾಗಿಲ್ಲ ಎನ್ನುವುದನ್ನು ಬಿಟ್ಟರೆ, ಅಲ್ಲಿ ನಡೆದಿದ್ದೆಲ್ಲವೂ ಸತ್ಯ ಎಂದಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪೊಲೀಸರು ವಿಜಯೋತ್ಸವಕ್ಕೆ ಮೊದಲೇ ಅನುಮತಿ ನಿರಾಕರಿಸಿದ್ದರು. ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗುವುದಿಲ್ಲ ಎಂದಿದ್ದರು.ಪೊಲೀಸ್‌ ಆಯುಕ್ತ ದಯಾನಂದ ಅವರೇ ಈ ಮಾತನ್ನು ಸಿಎಂಗೆ ಹೇಳಿದ್ದರು.

ಹಿಂದಿನ ದಿನ ರಾತ್ರಿ ಆರ್‌ಸಿಬಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಕುಣಿದು ಕುಪ್ಪಳಿಸಿದ್ದರು. ಪೊಲೀಸರಿಗೆ ಅದನ್ನು ನಿರ್ವಹಿಸುವುದೇ ಕಷ್ಟವಾಗಿತ್ತು. ಪೆಂಡಾಲ್ ಹಾಕುವುದನ್ನು ನೋಡಿಯೇ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಪೊಲೀಸ್‌ ಆಯುಕ್ತರು ಸಿಎಂಗೆ ಹೇಳಿದ್ರು. ಆದ್ರೆ ಸಿಎಂ ಕೇಳಲಿಲ್ಲ ಎಂದು ಆರೋಪ ಮಾಡಿದ್ರು.

ಸಿಎಂ ವಿಜಯೋತ್ಸವಕ್ಕೆ ಅನುಮತಿ ಕೊಟ್ಟರೆ, ನಾನು ಹಿಂದೆ ಬೀಳುತ್ತೇನೆ ಅಂತಾ ಡಿಕೆಶಿ.. ಡಿಸಿಎಂ ಅನುಮತಿ ಕೊಟ್ಟರೆ ನಾನು ಹಿಂದೆ ಬೀಳುತ್ತೇನೆ ಅಂತಾ ಸಿದ್ದರಾಮಯ್ಯ..  ಹೀಗೆ ಸಿಎಂ-ಡಿಸಿಎಂ ಮಧ್ಯೆಯೇ ಪೈಪೋಟಿ ಇತ್ತು ಎಂದು ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ರು.

ತಮ್ಮ ಮೇಲಿನ ಆರೋಪ ತಳ್ಳಿ ಹಾಕಲು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಇದೊಂದು ತಪ್ಪಿಸಿಕೊಳ್ಳುವ ತಂತ್ರ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಅಂದ್ರು

ಸಿಎಂ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದಿದ್ದು ಏಕೆ? ಅವರು ಏನಾದರೂ ತಪ್ಪಿ ಮಾಡಿರಬೇಕಲ್ಲ?ಅವರ ಮೇಲೆ ಏಕೆ ಎಫ್‌ಐಆ‌ರ್ ಆಗಿಲ್ಲ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದ್ರು.

 

Comments (0)

Your email address will not be published. Required fields are marked *

Back to top button