#Exclusive Newsಜನಸಾಮಾನ್ಯರ ದನಿ

ಎಕ್ಸ್ ಕ್ಲೂಸೀವ್ ಅಂದ್ರೆ ಫ್ರೀಡಂಟಿವಿ.. ನಾವು ಈ ಮಾತನ್ನು ಸುಮ್ನೆ ಹೇಳ್ತಿಲ್ಲ

ಎಕ್ಸ್ ಕ್ಲೂಸೀವ್ ಅಂದ್ರೆ ಫ್ರೀಡಂ ಟಿವಿ.. ಈ ಮಾತನ್ನು ನಾವು ಗರ್ವದಿಂದ ಹೇಳ್ತಿಲ್ಲ.. ಆರ್​ಸಿಬಿ ಅಭಿಮಾನಿಗಳು ಕಾಲ್ತುಳಿತದಿಂದ ಮೃತಪಟ್ಟ ತಕ್ಷಣ ಮುಂದೆ ಏನಾಗಬಹುದು ಎಂಬುದನ್ನು ತುಂಬಾನೆ ಸೂಕ್ಷ್ಮ ಎನ್ನಬಹುದಾದ ವಿಚಾರವನ್ನು ನಿಮ್ಮ ಫ್ರೀಡಂಟಿವಿ ಕೇವಲ ಒಂದೇ ಒಂದು ಪೋಸ್ಟರ್ ಮೂಲಕ ನೋಡುಗ ಬಳಗವನ್ನು ರವಾನೆ ಮಾಡಿತ್ತು

ದುರಂತ ನಡೆದ ತಕ್ಷಣ ಅಂದ್ರೆ ಜೂನ್ 4ರಂದು ನಿಮ್ಮ ಫ್ರೀಡಂಟಿವಿ ಪ್ರಕಟಿಸಿದ್ದ ಪೋಸ್ಟರ್ ಹೀಗಿದೆ ಒಮ್ಮೆ ನೋಡಿಬಿಡಿ..

ಐಪಿಎಲ್ ಮಾರಣಹೋಮಕ್ಕೆ ಹೊಣೆ ಯಾರ್ಯಾರು?
ದುರಂತಕ್ಕೆ ಫ್ರಾಂಚೈಸಿಗಳ ದುರಾಸೆ ಕಾರಣವಾಯ್ತಾ?
ಗೋವಿಂದರಾಜು ರಾಂಗ್ ಅಡ್ವೈಸ್ ಮುಳುವಾಯ್ತಾ?
ಕಮೀಷನರ್ ದಯಾನಂದ್ ಗೆ ಕಪ್ಪುಚುಕ್ಕೆ ಬಳಿದಿದ್ದು ಯಾರು?
ಯಾವಾಗ ಎಫ್​ಐಆರ್.. ಯಾರ ಮೇಲೆ ಕೇಸ್​…?
ಡಿಜಿಐಜಿಪಿ ಸಲೀಂ ಸಾಬ್ ಫೀಲ್ಡಿಗೆ ಇಳೀರಿ..
ಫ್ರೀಡಂಟಿವಿ ಕೇಳ್ತಿದೆ ಅಲ್ಲು ಅರ್ಜುನ್ ಕೇಸ್ ಇಲ್ಲೇಕಿಲ್ಲ?

ಇದು ನಿಮ್ಮ ಫ್ರೀಡಂಟಿವಿಯ ಪೋಸ್ಟರ್.. ಇದಾದ ಮರುದಿನ ಅಂದ್ರೆ ಜೂನ್ ಐದರಂದು ಮತ್ತು ಇಂದು ನಡೆದ ಸರಣಿ ಬೆಳವಣಿಗೆಳನ್ನು ಒಮ್ಮೆ ಗಮನಿಸಿ

ಫ್ರೀಡಂ ಟಿವಿ ಇಂಪ್ಯಾಕ್ಟ್ ನಂ.1
ಅಪರೂಪದಲ್ಲೇ ಅಪರೂಪ ಎನ್ನುವಂತೆ ಬೆಂಗಳೂರು ಕಮೀಷನರ್ ದಯಾನಂದ್, ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್​, ಡಿಜಿಪಿ ಶೇಖರ್​, ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಠಾಣೆ ಇನ್ಸ್ ಪೆಕ್ಟರ್ ಗಿರೀಶ್ ಮತ್ತು ಅವರನ್ನು ಅಮಾನತು ಮಾಡಿದ ಸಿಎಂ ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿಬಿಟ್ಟರು.

ಫ್ರೀಡಂ ಟಿವಿ ಇಂಪ್ಯಾಕ್ಟ್ ನಂ.2
ಆರ್​ಸಿಬಿ ಫ್ರಾಂಚೈಸಿ, ಇವೆಂಟ್​ ಆಯೋಜನೆ ಮಾಡುವ ಸಂಸ್ಥೆ ಡಿಎನ್​ಎ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಜವಾಬ್ದಾರಿ ಹೊತ್ತಿರುವ ಕೆಎಸ್​ಸಿಎ ಪದಾಧಿಕಾರಿಗಳ ಮೇಲೆ ಎಫ್​ಐಆರ್ ದಾಖಲಿಸಿ, ಅವರ ಬಂಧನಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿಬಿಟ್ರು

ಫ್ರೀಡಂ ಟಿವಿ ಇಂಪ್ಯಾಕ್ಟ್ ನಂ.3
ತಮ್ಮ ಆಪ್ತರೂ ಆಗಿರುವ ಕೆ ಗೋವಿಂದರಾಜ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆರವು ಮಾಡುವ ಅತ್ಯಂತ ಖಡಕ್ ತೀರ್ಮಾನವನ್ನು ತೆಗೆದುಕೊಂಡರು. ಕರ್ನಾಟಕ ಒಲಿಂಪಿಕ್​​ ಅಸೋಸಿಯೇಷನ್​ ಅಧ್ಯಕ್ಷರಾಗಿರುವ ಗೋವಿಂದರಾಜ್ ವಿರುದ್ಧ ಆರ್​ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಒತ್ತಡ ಹೇರಿದ ಆರೋಪವಿದೆ..

ಅಷ್ಟೇ ಅಲ್ಲ, ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ಹೇಮಂತ್​ ನಿಂಬಾಳ್ಕರ್​ ಅವರನ್ನು ಜಾಗ ತೋರಿಸದೇ ಆ ಸ್ಥಾನದಿಂದ ಮುಖ್ಯಮಂತ್ರಿಗಳು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ.. ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ಐಪಿಎಸ್​ ಅಧಿಕಾರಿ ರವಿಕುಮಾರ್​ ನೇಮಕ ಮಾಡಿದ್ದಾರೆ.

ಮುಂದೆ ಯಾರ ತಲೆದಂಡ ಆಗಬಹುದು ಎಂಬುದನ್ನು ಊಹೆ ಮಾಡಿ…

Comments (0)

Your email address will not be published. Required fields are marked *

Back to top button