Freedom TV

ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ಡಿಕೆಶಿ & ವಿಜಯೇಂದ್ರ; ಯತ್ನಾಳ್ ಸ್ಪೋಟಕ ಬಾಂಬ್

ಬೆಂಗಳೂರು: ಡಿ.ಕೆ.ಶಿವಕುಮಾರ್ ಜೊತೆ ರಮೇಶ್ ಜಾರಕಿಹಳಿ ಸಿಡಿ ಮಾಡಿಸಿದ್ದೆ ವಿಜಯೇಂದ್ರ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ಗುಡುಗಿದ್ದಾರೆ. ನಾನು ಮನೆಯಲ್ಲಿ ಸುಮ್ಮನೆ ಕೂರಲ್ಲ. ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೆ ಪ್ರವಾಸ ಮಾಡ್ತೇನೆ. ಇವರ ವಿರುದ್ಧ ಹೋರಾಟ ನಿಲ್ಲಿಸಲ್ಲ, ಹಿಂದೂಗಳ ರಕ್ಷಣೆಗೆ ರಾಜ್ಯ ಪ್ರವಾಸ. ಅಪ್ಪಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡ್ತೇನೆ ಶಪಥ ಮಾಡಿದ್ದಾರೆ

ದೆಹಲಿಯಲ್ಲಿ ಇರುವ ನಮ್ಮ ಸಂಸದರು ಎಲ್ರೂ ವಿಜಯೇಂದ್ರ ವಿರುದ್ಧ ಇದ್ದಾರೆ, ವಿಜಯೇಂದ್ರನನ್ನ ತೆಗೀರಿ ಅಂತಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿಕೆಶಿ ಜೊತೆ ಸೇರಿ ವಿಜಯೇಂದ್ರ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ರು. ಈಗ ಎದ್ದಿರುವ ಹನಿಟ್ರ‍್ಯಾಪ್ ಹಗರಣದಲ್ಲೂ ಇದೇ ಟೀಮ್ ಇದೆ ಅಂತ ಬಾಂಬ್‌ ಸಿಡಿಸಿದ್ದಾರೆ.

Comments (0)

Your email address will not be published. Required fields are marked *

Back to top button