ಮನರಂಜನೆಸಿನಿಮಾಸುದ್ದಿ

ದರ್ಶನ್ ಅಭಿನಯಿಸಿರುವ ಕಾಟೇರ ಚಿತ್ರ ತಂಡಕ್ಕೆ ನೋಟಿಸ್ ಜಾರಿ

ಬೆಂಗಳೂರು : ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಕನ್ನಡದ ಕಾಟೇರ ಚಿತ್ರ 100 ಕೋಟಿ ಮಾಡಿದ ಸಂತೊಷಕ್ಕೆ , ಚಿತ್ರ ತಂಡ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಓರಿಯನ್ ಮಾಲ್ ಸಮೀಪದ ಜೆಟ್ ಲಾಗ್ ಪಬ್ ನಲ್ಲಿ ಪಾರ್ಟಿಯನ್ನು ಏರ್ಪಡಿಸಿದ್ದರು.  ರಾತ್ರಿ1 ಗಂಟೆಯವರೆಗೂ ಪಬ್ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಆದರೆ ನಿಯಮ ಉಲ್ಲಂಘಿಸಿ ಬೆಳಗಿನ ಮುಂಜಾನೆ 5.15 ವರೆಗೂ ಹಲವು ನಟ-ನಟಿಯರು, ಚಿತ್ರತಂಡದ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಪಬ್​ನಲ್ಲಿದ್ದರು ಅಕರ್ಟ್ ಆದ ಸುಬ್ರಹ್ಮಣ್ಯ ನಗರ ಪೊಲೀಸರು ಪಬ್ ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥಾಪಕರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದರು.

ಜ.3 ಕಾಟೇರ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ವೇಳೆ ನಿಯಮ ಉಲ್ಲಂಘಿಸಿ ತಡ ರಾತ್ರಿಯವರೆಗೂ ಪಾರ್ಟಿ ಮಾಡಿದ್ದರೆಂದು ಹೇಳಲಾಗಿದೆ. ನಟ ದರ್ಶನ್, ನಿರ್ಮಾಪಕರಾದ ರಾಕ್​ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ನಿರ್ದೇಶಕ ತರುಣ್ ಸುಧೀರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಪಾರ್ಟಿಯಲ್ಲಿ ತಡ ರಾತ್ರಿಯವರೆಗೂ ಹಾಜರಿದ್ದ ಸೆಲೆಬ್ರೆಟಿಗಳನ್ನು ಪ್ರಕರಣದಲ್ಲಿ ಮರೆಮಾಚಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ನಡುವೆ ಡಿಸಿಪಿ ಅವರು ಖುದ್ದಾಗಿ ತನಿಖೆ ನಡೆಸಿದ ಸಂದರ್ಭದಲ್ಲಿ ಪಾರ್ಟಿಯಲ್ಲಿ ಹಾಜರಿದ್ದ ಪ್ರಸ್ತುತ ಚಿತ್ರತಂಡ ದುಬೈನಲ್ಲಿರುವ ಕಾರಣ ಅವರ ನಿವಾಸಕ್ಕೆ ನೋಟಿಸ್ ಅನ್ನು ನೀಡಲಾಗಿದ್ದು, ಅವರು ಮರಳಿದ ನಂತರ ಅವರನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button