Top Newsರಾಜ್ಯವಿಶೇಷಸಿನಿಮಾಸುದ್ದಿ

ರೆಬಲ್ ಸ್ಟಾರ್ ಮೊಮ್ಮಗನ ಹೆಸರು, ರಾಣಾ ಅಮರ್ ಅಂಬರೀಶ್

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ಅಪ್ಪನ‌ ಹೆಸರಿಟ್ಟಿದ್ದಾರೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

ಖಾಸಗಿ ಹೋಟೆಲ್​ನಲ್ಲಿ ಸುಮಲತಾ ಅಂಬರೀಶ್ ಮೊಮ್ಮಗನಿಗೆ ನಾಮಕಾರಣ ಶಾಸ್ತ್ರ ನೆರವೇರಿದೆ. ಸುಮತಾ ಅಂಬರೀಶ್ ಕುಟುಂಬದ ಆಪ್ತರು, ಹಾಗೂ ಸಂಬಂಧಿಕರಿಗಷ್ಟೇ ಕಾರ್ಯಕ್ರಮಕ್ಕೆ ಆಹ್ವಾನ ಕೊಡಲಾಗಿತ್ತು.

2024ರ ನವೆಂಬರ್ 12ರಂದು ಅಭಿಷೇಕ್-ಅವಿವಾಗೆ ಗಂಡು ಮಗು ಜನಿಸಿತ್ತು. ಅ ಅನ್ನೋ ಹೆಸರಿನಲ್ಲೇ ಮಗುವಿಗೆ ಹೆಸರಿಡೋ ಪ್ಲಾನ್ ಕುಟುಂಬಸ್ಥರಲ್ಲಿ ಇತ್ತು. ಅಂಬರೀಶ್ ಅವರ ಹೆಸರಿಡೋ ಬಗ್ಗೆಯೂ ಚರ್ಚಿಸಿದ್ದ ಕುಟುಂಬಸ್ಥರು ಅಂತಿಮವಾಗಿ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button