ರಾಜಕೀಯರಾಜ್ಯ

ಚಿತ್ರರಂಗದವರು ಟೀಕೆ ಮಾಡಲಿ ಅಂತಾನೆ ಆ ಪದ ಬಳಸಿದ್ದು; ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದಿನ ಕಲಾಪದಲ್ಲಿ ಭಾಗವಹಿಸುವ ಮೊದಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ನಟ್ಟು-ಬೋಲ್ಟು ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, ಚಿತ್ರರಂಗದವರು ಟೀಕೆ ಮಾಡಲಿ ಅಂತಾನೆ ನಟ್ಟು-ಬೋಲ್ಟು ಅಂತ ಪದ ಬಳಕೆ ಮಾಡಿದ್ದು ಎಂದರು.

ಮುಂದುವರೆದು ಮಾತನಾಡಿದ ಅವರು, ಸರ್ಕಾರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿದ್ದು, ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅಂತ. ಅದರಲ್ಲಿ ಅವರೇ ಭಾಗವಹಿಸದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

Comments (0)

Your email address will not be published. Required fields are marked *

Back to top button