Top Newsಮನರಂಜನೆಸಿನಿಮಾಸುದ್ದಿ

ಸಂಗೀತ ಕಾರ್ಯಕ್ರಮದಲ್ಲಿ ದಿಢೀರ್ ಆರೋಗ್ಯದಲ್ಲಿ ಏರುಪೇರು : ಸೋನು ನಿಗಮ್ ಆಸ್ಪತ್ರೆಗೆ ದಾಖಲು

ಮುಂಬೈ: ಭಾರೀಯ ಚಿತ್ರರಂಗದ ಜನಪ್ರಿಯ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರಾಗಿದ್ದು ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.. ತಮ್ಮ ಆರೋಗ್ಯದ ಬಗ್ಗೆ ಫ್ಯಾನ್ಸ್‌ಗೆ ಗಾಯಕ ಸೋಶಿಯಲ್ ಮೀಡಿಯಾದಲ್ಲಿ ವಿವರಿಸಿ ಪೋಸ್ಟ್ ಹಾಕಿದ್ದಾರೆ.

ಇತ್ತೀಚೆಗೆ ಲೈವ್ ಕಾನ್ಸರ್ಟ್ ವೇಳೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ನೋವು ಅನ್ನು ತೋರಿಸಿಕೊಳ್ಳದೇ ಒಪ್ಪಿಕೊಂಡಿದ್ದ ಸಂಗೀತ ಕಾರ್ಯಕ್ರಮವನ್ನು ಮುಗಿಸಿಕೊಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ನಂತರ ಏನಾಯ್ತು ಎಂದು ಅವರು ವಿವರಿಸಿದ್ದಾರೆ.

ಈ ಕುರಿತು ಸ್ವತಃ ಗಾಯಕ ಸೋನು ನಿಗಮ್ ಆಸ್ಪತ್ರೆಯಿಂದಲೇ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.ವಿಡಿಯೋದಲ್ಲಿ ಹೇಳಿರುವಂತೆ ನಾನು ನನ್ನ ಸಂಗೀತ ಕಾರ್ಯಕ್ರಮದ ವೇಳೆ ವೇದಿಕೆ ತುಂಬಾ ಓಡಾಡಿ ಸಂಗೀತ ಹಾಡುತ್ತೇನೆ ಅದೇ ರೀತಿ ಭಾನುವಾರ ನಡೆದ ಕಾರ್ಯಕ್ರಮದಲ್ಲೂ ವೇದಿಕೆ ತುಂಬೆಲ್ಲಾ ಓಡಾಡಿ ಸಂಗೀತ ಹಾಡುತ್ತಿದ್ದೆ ಆಗ ಒಮ್ಮಲೇ ಬೆನ್ನು ನೋವು ಕಾಣಿಸಿಕೊಂಡಿತು ಆದರೆ ಅದನ್ನು ಗಂಭೀರವಾಗಿ ಪರಿಗಣಿಸದೆ ಕಾರ್ಯಕ್ರಮ ಮುಂದುವರೆಸಿದೆ ಆದರೆ ಬೆನ್ನು ನೋವು ಹೆಚ್ಚಾಗತೊಡಗಿತು ಅಲ್ಲದೆ ಯಾರೋ ಬೆನ್ನಿಗೆ ಇಂಜೆಕ್ಷನ್ ಚುಚ್ಚಿದ ರೀತಿ ಭಾಸವಾಯಿತು ಇದಾದ ಬಳಿಕ ಸ್ವಲ್ಪ ನಡೆದಾಡಿದರೂ ವಿಪರೀತ ನೋವು ಹೆಚ್ಚಾಗುತ್ತಿತ್ತು ಎಂದು ಅವರು ಹೇಳಿರೋ ವಿಡಿಯೋ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಕ್ಯಾಪ್ಶನ್‌ನಲ್ಲಿ ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು ಎಂದಿದ್ದಾರೆ.

ಇನ್ನೂ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅವರು ಹಾಡಿದ್ದಾರೆ. ‘ಪರಮಾತ್ಮ’ ಸಿನಿಮಾದ ಪರವಶನಾದೆನು ಸಾಂಗ್, ‘ಜಾನು’ ಸಿನಿಮಾದಲ್ಲಿ ‘ನೀನು ನನ್ನ ಸವಿಗನಸು’ ಸೇರಿದಂತೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಬಹುಭಾಷಾ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button