Top Newsಕ್ರೈಂ ಸ್ಟೋರಿರಾಜ್ಯಸುದ್ದಿ

ಪಿಂಕಿ ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆತ್: ಹೆಂಡತಿ ಟಾರ್ಚರ್‌ಗೆ ಪತಿ ಸೂಸೈಡ್!

ಹುಬ್ಬಳ್ಳಿ: ಹೆಂಡತಿ ಕಾಟಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಹೆಂಡತಿ ಕಿರುಕುಳ ತಾಳಲಾರದೆ ಗಂಡ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.

ಈಚೆಗೆ ಪತ್ನಿಯ ಕಿರುಕುಳಕ್ಕೆ ಪತಿ ಸಾವನ್ನಪ್ಪುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಚೆಗೆ ಅತುಲ್ ಸುಭಾಷ್ ಸಾವು ಪ್ರಕರಣ ಇಡೀ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಅದೇ ರೀತಿತಿಯ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.

ಡೆತ್‌ನೋಟ್‌ನಲ್ಲಿ ಅವರ ತಂದೆಯನ್ನು ನೆನಪಿಸಿಕೊಂಡಿರುವ ಪೀಟರ್‌, ಡ್ಯಾಡಿ ಐ ಆ್ಯಮ್ ಸಾರಿ.. ಎಂದು ಬರೆದಿದ್ದಾರೆ. ಹೆಂಡತಿ ಪಿಂಕಿ ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆಥ್ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶವ ಪೆಟ್ಟಿಗೆ ಮೇಲೆ `ಹೆಂಡತಿ ಟಾರ್ಚರ್‍ನಿಂದ ಸಾವು’ ಎಂದು ಬರೆಸುವಂತೆ ಡೆತ್ ನೋಟ್ ಉಲ್ಲೇಖಿಸಲಾಗಿದೆ. ಪೀಟರ್ ಆಸೆಯಂತೆ ಶವ ಪೆಟ್ಟಿಗೆ ಮೇಲೆ `ಮೈ ಡೆತ್ ಬಿಕಾಸ್ ಆಫ್ ಮೈ ವೈಫ್ ಟಾರ್ಚರ್’ ಎಂದು ಕುಟುಂಬಸ್ಥರು ಬರೆಸಿಕೊಂಡಿದ್ದಾರೆ.

ಪೀಟರ್ ಪತ್ನಿ ಖಾಸಗಿ ಶಾಲೆ ಶಿಕ್ಷಕಿಯಾಗಿದ್ದರು. ಇತ್ತೀಚಿಗೆ ಬೇರೆ ವ್ಯಕ್ತಿ ಜೊತೆಗೆ ಸುತ್ತಾಟ ನಡೆಸುತ್ತಿದ್ದರು. ಇದನ್ನು ಗಮನಿಸಿದ ಪೀಟರ್ ಹಾಗೂ ಆತನ ಪತ್ನಿ ಪಿಂಕಿ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು.

ಹಲವಾರು ತಿಂಗಳು ಪತಿಯಿಂದ ದೂರವಿದ್ದ ಮಹಿಳೆ, ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಳು. ಇಂದು ಈ ಬಗ್ಗೆ ಕೋರ್ಟ್‍ನಲ್ಲಿ ವಿಚಾರಣೆ ಇತ್ತು. ಆಕೆ ವಕೀಲರ ಮೂಲಕ 20 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button