#Exclusive NewsTop Newsಸಿನಿಮಾಸುದ್ದಿ

‘ಪುಷ್ಪ 2’ ವಿವಾದದ ಮಧ್ಯೆಯೇ ಅಲ್ಲು ಅರ್ಜುನ್ ದಿಟ್ಟ ನಿರ್ಧಾರ …!

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ ಮೂಲಕ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರದ ಗಳಿಕೆ 1,800 ಕೋಟಿ ರೂಪಾಯಿ ಆಗುತ್ತಿದೆ. ಅದೇ ರೀತಿ ‘ಪುಷ್ಪ 2’ ಸಿನಿಮಾ ವಿವಾದಗಳ ಮೂಲಕವೂ ಸುದ್ದಿ ಆಗುತ್ತಿದೆ. ಇವುಗಳ ಮಧ್ಯೆ ಅಲ್ಲು ಅರ್ಜುನ್ ಐದು ವರ್ಷಗಳ ತಪಸ್ಸಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ.

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರಕ್ಕಾಗಿ ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟಿದ್ದರು. ಈಗ ಅಲ್ಲು ಅರ್ಜುನ್ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ಲುಕ್​ಗೆ ಬ್ರೇಕ್ ಹಾಕಬೇಕಿದೆ. ಹೀಗಾಗಿ ಅವರು ಗಡ್ಡ ಟ್ರಿಮ್ ಮಾಡಿ, ಉದ್ದನೆಯ ಕೂದಲಿಗೆ ಕತ್ತರಿ ಪ್ರಯೋಗ ಮಾಡಲಿದ್ದಾರೆ. ಅವರು ಶೀಘ್ರವೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್​ನ ಫೋಟೋ ಪೋಸ್ಟ್ ಮಾಡಲಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ ಅವರು ಉದ್ದನೆಯ ಗಡ್ಡ ಹಾಗೂ ಕೂದಲನ್ನು ಬಿಡಲು ಸಾಕಷ್ಟು ಶ್ರಮ ಹಾಕಿದ್ದರು. ಇದು ಅವರಿಗೆ ತಪಸ್ಸಿನ ರೀತಿಯೇ ಆಗಿತ್ತು. ಉದ್ದನೆಯ ಗಡ್ಡ ಬಿಟ್ಟಾಗ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅವರಿಗೆ ಅಭ್ಯಾಸ ಇಲ್ಲದ ಕಾರಣ ಕಿರಿಕಿರಿ ಉಂಟು ಮಾಡಿದ್ದೂ ಇದೆ. ಇದನ್ನು ಅವರು ಸಹಿಸಿಕೊಂಡಿದ್ದಾರೆ. ಈಗ ಆ ಲುಕ್​ಗೆ ಅವರು ಬ್ರೇಕ್ ಹಾಕುತ್ತಿದ್ದಾರೆ.

ಅಲ್ಲು ಅರ್ಜುನ್ ಅವರು ಗಡ್ಡಕ್ಕೆ ಕತ್ತರಿ ಹಾಕಲೇಬೇಕಾದ ಅನಿವಾರ್ಯತೆ ಏಕಿದೆ ಎಂಬುದನ್ನು ವಿವರಿಸಿದ್ದರು. ‘ನಾನು ಗಡ್ಡ ಬಿಟ್ಟಿರುವುದರಿಂದ ನನ್ನ ಮಗಳು ನನ್ನ ಹತ್ತಿರಕ್ಕೂ ಬರುತ್ತಿಲ್ಲ. ಅವಳಿಗೆ ಸರಿಯಾಗಿ ಕಿಸ್ ಮಾಡೋಕೂ ಆಗಿಲ್ಲ. ಕಳೆದ ಕೆಲ ವರ್ಷಗಳಿಂದ ಅವಳಿಗೆ ನಾನು ಸರಿಯಾಗಿ ಮುತ್ತು ಕೊಡಲೇ ಇಲ್ಲ. ಹೀಗಾಗಿ, ಮೊದಲು ಗಡ್ಡಕ್ಕೆ ಕತ್ತರಿ ಹಾಕಬೇಕು’ ಎಂದಿದ್ದರು ಅವರು. ಈಗ ‘ಪುಷ್ಪ 2’ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿರುವುದರಿಂದ ಅಲ್ಲು ಅರ್ಜುನ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಬೇಕಿದೆ.

Comments (0)

Your email address will not be published. Required fields are marked *

Back to top button