ಬೆಂಗಳೂರು – ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧಗಳು ಹೆಚ್ಚಾಗುತ್ತಿದ್ದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ 12,627 ಪ್ರಕರಣ ದಾಖಲಾಗಿರುವ ಪೈಕಿ 3603 ಪ್ರಕರಣಗಳಷ್ಟೇ ಪೊಲೀಸರು ಬೇಧಿಸಿದ್ದಾರೆ. ಕೊಲೆ, ರಾಬರಿ, ಮನೆಗಳ್ಳತನ, ವಾಹನ ಕಳ್ಳತನ, ಅಪಹರಣ ಹಾಗೂ ಸೈಬರ್ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ.

ಸರಗಳ್ಳತನ, ಡ್ರಗ್ಸ್, ಜೂಜಾಟ ಪ್ರಕರಣಗಳಲ್ಲಿ ಕೊಂಚ ಮಟ್ಟದಲ್ಲಿ ಹೆಚ್ಚಳವಾಗಿದೆ.  2023ರಲ್ಲಿ 205 ಕೊಲೆ, 673 ರಾಬರಿ,1692 ಮನೆಗಳ್ಳತನ ಹಾಗೂ 5909 ವಾಹನ ಕಳ್ಳತನ ಪ್ರಕರಣ ದಾಖಲಾಗಿವೆ. ಅದೇ ರೀತಿ 2022ರಲ್ಲಿ ಒಟ್ಟಾರೆ 9254 ಪ್ರಕರಣ ದಾಖಲಾದರೆ ಕಳೆದ ವರ್ಷ 12,627 ಕೇಸ್ ಗಳು ದಾಖಲಾಗಿವೆ. ಪ್ರಚೋದನೆ ಒಳಗಾಗಿಯೇ ಕೊಲೆಯೇ ಹೆಚ್ಚು 2022ರಲ್ಲಿ 173 ಕೊಲೆ ಪ್ರಕರಣ ದಾಖಲಾಗಿದ್ದರೆ ಕಳೆದ ವರ್ಷ 207 ಕೊಲೆ ಪ್ರಕರಣಗಳು ದಾಖಲಾಗಿವೆ.

ಲಾಭಕ್ಕಾಗಿ ಕೊಲೆ ಪ್ರಕರಣಗಳ ಸಂಖ್ಯೆ ಕೇವಲ ಎರಡು ಹತ್ಯೆಗಳು ನಡೆದಿದ್ದು, ಗಣನೀಯವಾಗಿ ಇಳಿಕೆಯಾಗಿವೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇ.31ರಷ್ಟು ಹೆಚ್ಚಳವಾಗಿದೆ. ಮುಖ್ಯವಾಗಿ ಸ್ಥಳದಲ್ಲೇ ಪ್ರಚೋದನೆಗೊಳಗಾಗಿ ಹತ್ಯೆ, ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹಗಳಿಂದ ಹತ್ಯೆಯಾಗಿವೆ.ಇನ್ನೂ ಕಳೆದ ವರ್ಷ 673 ರಾಬರಿ ಪ್ರಕರಣ ದಾಖಲಾಗಿದ್ದು, ಶೇ.41ರಷ್ಟು ಹೆಚ್ಚಳವಾಗಿದೆ. ಒಟ್ಟು ರಾಬರಿ ಪ್ರಕರಣಗಳ ಪೈಕಿ 385 ಪ್ರಕರಣಗಳು ಮೊಬೈಲ್ ಕಸಿದ ಪ್ರಕರಣಗಳೇ ಆಗಿವೆ. ಇನ್ನೂ ಕಳೆದ ವರ್ಷ 1189 ಅಪಹರಣ ಪ್ರಕರಣ ದಾಖಲಾಗಿದ್ದು, 981 ಕೇಸ್ ಗಳನ್ನ ಬೇಧಿಸಲಾಗಿದೆ. 2022ರಲ್ಲಿ 931 ಪ್ರಕರಣವಷ್ಟೇ ದಾಖಲಾಗಿತ್ತು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಧಿಕವಾಗಿದ್ದು, 2022 ಹಾಗೂ 2023ರಲ್ಲಿ ಅನುಕ್ರಮವಾಗಿ 2630 ಹಾಗೂ 3260 ಪ್ರಕರಣ ದಾಖಲಾಗಿವೆ. ಈ ಪೈಕಿ 1135 ಲೈಂಗಿಕ ದೌರ್ಜನ್ಯ ಪ್ರಕರಣಗಳು ಪತಿ ಅಥವಾ ಸಂಬಂಧಿಕರಿಂದ 696 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ 631ರಷ್ಟಾಗಿದೆ. ನಿರೀಕ್ಷೆಯಂತೆ ಸೈಬರ್ ಅಪರಾಧ ಹೆಚ್ಚಳ ದಿನೇ ದಿನೇ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, 2022ರಲ್ಲಿ 9940 ಸೈಬರ್ ಕೇಸ್ ದಾಖಲಾದರೆ 2023ರಲ್ಲಿ 17623 ಪ್ರಕರಣಗಳು ದಾಖಲಾಗಿವೆ. ಆರ್ಥಿಕ ಅಪರಾಧ ಪ್ರಕರಣಗಳ ಸಂಖ್ಯೆ ಅಧಿಕಗೊಂಡಂತೆ ಬೇಧಿಸುವ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. 17623 ಪ್ರಕರಣಗಳ ಪೈಕಿ 1271 ಪ್ರಕರಣಗಳನ್ನ ಮಾತ್ರ ಬೇಧಿಸಲಾಗಿದೆ.ಸೈಬರ್ ಅಪರಾಧ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದ ಪರಿಣಾಮ ಎನ್ ಸಿಆರ್ ಪಿ ಪೋರ್ಟಲ್, 112 ಮುಖಾಂತರ ದೂರುಗಳನ್ನ ಎಫ್ಐಆರ್ ಆಗಿ ಪರಿವರ್ತನೆ ಹಾಗೂ ಸೆನ್ ಪೊಲೀಸ್ ಠಾಣೆ ಹೊರತುಪಡಿಸಿ ನಗರದ ಎಲ್ಲಾ ಕಾನೂನು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪ್ರಕರಣ ಸಂಖ್ಯೆಯಲ್ಲಿ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಪೊಲೀಸ್ ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ. 2023ರಲ್ಲಿ 639  ಪ್ರಕರಣಗಳನ್ನ ಜೂಜಾಟ ಪ್ರಕರಣ ದಾಖಲಾಗಿವೆ. ಕಳೆದ ವರ್ಷ 6006 ಮಂದಿ ನಾಪತ್ತೆಯಾಗಿದ್ದು, 5026 ಕಾಣೆಯಾದವರನ್ನ ಪತ್ತೆಹಚ್ಚಲಾಗಿದೆ. 2023ರಲ್ಲಿ 2358 ಮಂದಿ ಆತ್ಮಹತ್ಯೆಗೆ ಜಾರಿದ್ದು, ಈ ಪೈಕಿ 1700 ಪುರುಷರೇ ಆಗಿದ್ದಾರೆ. ರೌಡಿ ಚಟುವಟಿಕೆ ಭಾಗಿ ಆರೋಪದಡಿ 324 ಮಂದಿ ರೌಡಿಗಳನ್ನ ಬಂಧಿಸಲಾಗಿದೆ. 2023ರಲ್ಲಿ 3443 ಡ್ರಗ್ಸ್ ಪ್ರಕರಣಗಳಲ್ಲಿ 103.22 ಕೋಟಿ ಮೌಲ್ಯದ 5387 ಕೆ.ಜಿ.ತರಹೇವಾರಿ ಮಾದಕ ವಸ್ತುಗಳನ್ನ ಜಪ್ತಿ ಮಾಡಿ 4399 ಮಂದಿ ಬಂಧಿಸಲಾಗಿದೆ.

By admin

Leave a Reply

Your email address will not be published. Required fields are marked *

Verified by MonsterInsights