#Exclusive NewsTop Newsಮನರಂಜನೆಸಿನಿಮಾಸುದ್ದಿ
ನಿನ್ನ ಸಿನಿಮಾ ಬಿಡುಗಡೆ ಆಗದಂತೆ ತಡೆ ಹಿಡಿಯಲಾಗುವುದು ಎಂದು ಅಲ್ಲು ಅರ್ಜುನ್ಗೆ ಬೆದರಿಕೆ

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಅಲ್ಲು ಅರ್ಜುನ್ ವಿರುದ್ಧ ದ್ವೇಷ ತೀರಿಸಿಕೊಳ್ಳುವ ಕಾರ್ಯವನ್ನು ತೆಲಂಗಾಣ ಸರ್ಕಾರ ಮಾಡುತ್ತಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಈಗ ಕಾಂಗ್ರೆಸ್ ಶಾಸಕನೊಬ್ಬ ಅಲ್ಲು ಅರ್ಜುನ್ಗೆ ಬೆದರಿಕೆ ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ತೆಲಂಗಾಣ ಕಾಂಗ್ರೆಸ್ ಶಾಸಕ ಭೂಪತಿ ರೆಡ್ಡಿ, ‘ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಗ್ಗೆ ಅಲ್ಲು ಅರ್ಜುನ್ ಯಾವುದೇ ರೀತಿಯ ಟೀಕೆ ಮಾಡಿದರೂ ಸಹ ಸಹಿಸುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ರೇವಂತ್ ರೆಡ್ಡಿ ಬಗ್ಗೆ ಅಲ್ಲು ಅರ್ಜುನ್ ಅಥವಾ ಅವರ ಅಭಿಮಾನಿಗಳು ಟೀಕೆ ಮಾಡಿದರೆ ತೆಲಂಗಾಣ ರಾಜ್ಯದಲ್ಲಿ ಅಲ್ಲು ಅರ್ಜುನ್ರ ಸಿನಿಮಾ ಬಿಡುಗಡೆ ಆಗದಂತೆ ತಡೆ ಹಿಡಿಯಲಾಗುವುದು ಎಂದು ಬೆದರಿಕೆ ಸಹ ಹಾಕಿದ್ದಾರೆ ಭೂಪತಿ ರೆಡ್ಡಿ.
‘ನಮ್ಮ ಸಿಎಂ ರೇವಂತ್ ರೆಡ್ಡಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ನಿನ್ನದು ಆಂಧ್ರ ಪ್ರದೇಶ, ಇಲ್ಲಿಗೆ (ತೆಲಂಗಾಣ) ಬದುಕಲು ಬಂದಿದ್ದೀಯ. ನಿನಗೆ 100% ಎಚ್ಚರಿಕೆ ಕೊಡುತ್ತಿದ್ದೇವೆ. ಒಸ್ಮಾನಾ ಯೂನಿವರ್ಸಿಟಿಯ ಜಾಯಿಂಟ್ ಆಕ್ಷನ್ ಸಮಿತಿಯ ಕೆಲ ಸದಸ್ಯರು ನಿನ್ನ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಇನ್ನು ಮುಂದಾದರೂ ನೀನು ಸುಮ್ಮನೆ ಇರಲಿಲ್ಲ ಎಂದರೆ ನಿನ್ನ ಸಿನಿಮಾಗಳನ್ನು ತೆಲಂಗಾಣದಲ್ಲಿ ನಿಷೇಧ ಮಾಡಬೇಕಾಗುತ್ತದೆ’ ಎಂದಿದ್ದಾರೆ ಭೂಪತಿ ರೆಡ್ಡಿ.




