
ಕ್ರಿಕೆಟ್ & ಬಾಲಿವುಡ್ನ ಮತ್ತೊಂದು ಪ್ರೇಮಕತೆಯ ಸೌಂಡ್ ಸಖತ್ ಆಗಿಯೇ ಕೇಳಿ ಬರುತ್ತಿದೆ. ಈ ಬಾಲಿವುಡ್ ಬ್ಯೂಟಿಗೆ ಕ್ಲೀನ್ ಬೋಲ್ಡ್ ಆಗಿರೋದು ವೇಗಿ ಮೊಹಮ್ಮದ್ ಸಿರಾಜ್. ಕಾಶ್ಮೀರಿ ಚೆಲುವೆಗೆ ಮೊಹಮ್ಮದ್ ಸಿರಾಜ್ ಮನಸೋತಿದ್ದಾರೆ. ಅಷ್ಟಕ್ಕೂ ಸಿರಾಜ್ ಮನಗೆದ್ದ ಚೆಲುವೆ ಯಾರು?.
ಇಂಡಿಯನ್ ಕ್ರಿಕೆಟ್ಗೂ ಬಾಲಿವುಡ್ಗೂ ಅದೇನೋ ಬಿಡಿಸಲಾಗದ ನಂಟು. ಮನ್ಸೂರ್ ಅಲಿ ಖಾನ್ ಪಟೌಡಿ- ಶರ್ಮಿಳಾ ಠಾಕೂರ್ರಿಂದ ಹಿಡಿದು ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮಾ, ಕೆ.ಎಲ್ ರಾಹುಲ್ -ಆತಿಯಾ ಶೆಟ್ಟಿವರೆಗೆ ಬಾಲಿವುಡ್ಗೂ ಕ್ರಿಕೆಟ್ಗೂ ಸಂಬಂಧ ಬೆಸೆದ ಹಲವು ಜೋಡಿಗಳಿವೆ. ಟೀಮ್ ಇಂಡಿಯಾದ ಪೇಸ್ ಸೆನ್ಸೇಷನ್ ಮೊಹಮ್ಮದ್ ಸಿರಾಜ್ ಹೆಸರು ಬಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.ಒಂದೆಡೆ ಐಪಿಎಲ್ ಮೆಗಾ ಹರಾಜಿನಲ್ಲಿ ಸಿರಾಜ್ ಜಾಕ್ಪಾಟ್ ಹೊಡೆದಿದ್ದು ₹12 ಕೋಟಿ, 25 ಲಕ್ಷಕ್ಕೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ. ಇನ್ನೊಂದೆಡೆ ಆರ್ಸಿಬಿ ತೊರೆದ ಬೇಸರದಲ್ಲಿ ಸಿರಾಜ್ ಭಾವನಾತ್ಮಕ ಬರಹ ಬರೆದು. ಇದರ ನಡುವೆ ಸಿರಾಜ್ ಡೇಟಿಂಗ್ ಗಾಸಿಪ್ ಸೆನ್ಸೇಷನ್ ಸೃಷ್ಟಿಸಿದೆ.
ಸದ್ಯ ಬಾಲಿವುಡ್ ಅಂಗಳದಲ್ಲಿ ಈ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಟೀಮ್ ಇಂಡಿಯಾ ವೇಗಿ ಬಾಲಿವುಡ್ನ ಬ್ಯೂಟಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅನ್ನೋ ಸುದ್ದಿ ಬಿಟೌನ್ನಲ್ಲಿ ಹರಿದಾಡುತ್ತಿದೆ. ಅಂದ್ಹಾಗೆ ಸಿರಾಜ್ ಜೊತೆಗೆ ತಳುಕು ಹಾಕಿಕೊಂಡಿರುವ ಬೆಡಗಿಯ ಹೆಸರು ಮಾಹಿರಾ ಶರ್ಮಾ.

ಬಿಗ್ಬಾಸ್ನಲ್ಲಿದ್ದಾಗ ಮಾಹಿರಾ ಶರ್ಮಾ ಹಾಗೂ ಮತ್ತೊಬ್ಬ ಸ್ಪರ್ಧಿ ಪರಾಸ್ ಛಬ್ರಾ ಆತ್ಮೀಯರಾಗಿದ್ರು. ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಇಬ್ಬರೂ ಕೆಲ ಕಾಲ ಡೇಟಿಂಗ್ ನಡೆಸಿದ್ರು. ಇಬ್ಬರ ಲವ್ಸ್ಟೋರಿ ಸಖತ್ ಸೌಂಡ್ ಮಾಡಿತ್ತು. ಹಲವು ಮ್ಯೂಸಿಕ್ ಅಲ್ಬಂಗಳಲ್ಲೂ ಒಟ್ಟಾಗಿ ನಟಿಸಿದ್ದರು. ಆದ್ರೆ, ಕಳೆದ ವರ್ಷ ಇಬ್ಬರ ನಡುವೆ ಬ್ರೇಕ್ ಆದ ಸುದ್ದಿ ಹೊರಬಿತ್ತು. ಆ ಬಳಿಕ ಇನ್ಸ್ಸ್ಟಾದಲ್ಲಿ ಪರಾಸ್ನ ಅನ್ಫಾಲೋ ಮಾಡಿದ್ದ ಮಾಹಿರಾ, ಒಟ್ಟಿಗಿದ್ದ ಫೋಟೋಗಳನ್ನ ಡಿಲೀಟ್ ಮಾಡಿದ್ದರು.
ಸದ್ಯ ಮಾಹಿರಾ ಶರ್ಮಾ ಹೆಸರು ಮೊಹ್ಮದ್ ಸಿರಾಜ್ ಜೊತೆ ಹೆಚ್ಚಾಗಿ ಕೇಳಿ ಬರುತ್ತಿದೆ. ಡೇಟಿಂಗ್ ಗಾಸಿಪ್ ಸಖತ್ ಸೌಂಡ್ ಮಾಡುತ್ತಿದೆ. ಕೆಲ ಫ್ಯಾನ್ಸ್ ಇಬ್ಬರೂ ಲವ್ ಬರ್ಡ್ಸ್ ಎಂದೇ ತಿರ್ಮಾನಿಸಿದ್ದಾರೆ. ಆದ್ರೆ, ಮಾಹಿರಾ ಶರ್ಮಾ ಆಗ್ಲಿ, ಮೊಹಮ್ಮದ್ ಸಿರಾಜ್ ಆಗ್ಲಿ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಇದನ್ನ ಮೌನಂ ಸಮ್ಮತಿ ಲಕ್ಷಣಂ ಅನ್ನಬೇಕೋ ಅಥವಾ ಗಾಸಿಪ್ ಅಂತಾ ನಗ್ಲೆಟ್ ಮಾಡ್ತಿದ್ದಾರೆ ಅನ್ನಬೇಕೋ, ಅನ್ನೋದೆ ದೊಡ್ಡ ಕನ್ಪ್ಯೂಶನ್.




