Top Newsಸಿನಿಮಾಸುದ್ದಿ

ಶೂಟಿಂಗ್​ ವೇಳೆ ಯಶ್ ಹಾಕುವ ಶ್ರಮ ಹೇಗಿರುತ್ತದೆ? ಇಲ್ಲಿದೆ ವಿಡಿಯೋ

ಯಶ್ ಅವರು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದರ ಹಿಂದೆ ಸಾಕಷ್ಟು ಅವರ ಶ್ರಮ ಇದೆ. ಅವರು ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟವರು. ಸಾಕಷ್ಟು ಕಷ್ಟ ನೋಡಿ ಬಂದವರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಯಶ್ ಅವರು ಹಾಕುವ ಶ್ರಮ ಎಂಥದ್ದು ಎಂಬ ವಿಡಿಯೋ ಒಂದು ವೈರಲ್ ಆಗಿದೆ.

‘ಕೆಜಿಎಫ್ 2’ ಯಶ್ ವೃತ್ತಿ ಜೀವನದ ಹಾಗೂ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬಿಸ್ನೆಸ್ ಮಾಡಿದಂಹ ಸಿನಿಮಾ. ಈ ಚಿತ್ರದಿಂದ ಯಶ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗ ‘ಕೆಜಿಎಫ್’ ಚಿತ್ರದ ಒಂದು ದೃಶ್ಯವನ್ನು ಈಗ ವೈರಲ್ ಮಾಡಲಾಗಿದೆ. ಇದು ಮೇಕಿಂಗ್ ವಿಡಿಯೋ. ಈ ವಿಡಿಯೋದಲ್ಲಿ ಯಶ್ ಹಾಕಿರೋ ಶ್ರಮ ಎದ್ದು ಕಾಣುತ್ತಿದೆ. ಇದನ್ನು ನೋಡಿದ ಯಸ್ ಅಭಿಮಾನಿಗಳು ಸಾಕಷ್ಟು ಮೇಚ್ಚುಗೆಗಳು ಬಂದಿವೆ.

ಗಣಿಗಾರಿಕೆ ನಡೆಯುವ ನರಾಚಿಗೆ ಯಶ್ ತೆರಳಿರುತ್ತಾರೆ. ಅಲ್ಲಿ ಮ್ಯಾಪ್ ಇರೋ ಜಾಗಕ್ಕೆ ಯಶ್ ಹೋಗಿರುತ್ತಾರೆ. ಈ ವೇಳೆ ಅವರು ತಪ್ಪಿಸಿಕೊಂಡು ಬರುವಾಗ ಯಶ್ ಟ್ರಕ್ ಅಡಿಗೆ ಹೋಗುವ ದೃಶ್ಯ ಇದೆ. ಇದನ್ನು ಮಾಡುವಾಗ ಯಶ್ ಸಾಕಷ್ಟು ತೊಂದರೆ ಅನುಭವಿಸಿದ್ದರು. ಯಶ್ ಕಿವಿಗೆ ಮರಳು ಕೂಡ ಹೋಗಿತ್ತು. ಆ ದೃಶ್ಯವನ್ನು ಈಗ ವೈರಲ್ ಮಾಡಲಾಗಿದೆ. ‘ಯಶ್ ಅವರ ಶ್ರಮ ನೋಡಿ’ ಎಂದು ಅನೇಕರು ಹೇಳಿದ್ದಾರೆ. ಯಶ್ ಅವರು ಇಲ್ಲಿ ಡೂಪ್​ ಬಳಸಬಹುದಿತ್ತು. ಆದರೆ, ಆ ರೀತಿ ಮಾಡಿಲ್ಲ.

ಯಶ್ ಅವರು ಪ್ರತಿ ದೃಶ್ಯವನ್ನು ಇಷ್ಟಪಟ್ಟು ಮಾಡುತ್ತಾರೆ. ಆ್ಯಕ್ಷನ್ ದೃಶ್ಯಗಳನ್ನು ಅವರು ಕಷ್ಟಪಟ್ಟು ಮಾಡುತ್ತಾರೆ. ಇದಕ್ಕಾಗಿ ಸಾಕಷ್ಟು ಸಿದ್ಧತೆ ಕೂಡ ಮಾಡುತ್ತಾರೆ. ಯಶ್ ಅವರು ಶೂಟಿಂಗ್ ವೇಳೆ ಹಾಕಿದ ಶ್ರಮ ಎದ್ದು ಕಾಣಿಸುತ್ತದೆ.

ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಮಲಯಾಳಂನ ಗೀತು ಮೋಹನ್​ದಾಸ್ ಅವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಇದರ ನಿರ್ಮಾಣ ಮಾಡುತ್ತಿದೆ. ತಮಿಳಿನ ನಯನತಾರಾ ಹಾಗೂ ಹಿಂದಿಯ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಹಿಂದಿಯ ರಾಮಾಯಣ ಚಿತ್ರಕ್ಕೆ ಅವರು ನಿರ್ಮಾಪಕರು ಕೂಡ ಹೌದು. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಹಲವು ಪಾರ್ಟ್​​ಗಳಲ್ಲಿ ರಿಲೀಸ್ ಆಗಲಿದೆ.

Comments (0)

Your email address will not be published. Required fields are marked *

Back to top button