#Exclusive NewsTop Newsರಾಜಕೀಯಸುದ್ದಿ
ಜಮೀರ್ ಅಹ್ಮದ್ ಸೂಪರ್ ಸಿಎಂ ತರ ವರ್ತಿಸುತ್ತದ್ದಾರೆ : ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ಸೂಪರ್ ಸಿಎಂರಂತೆ ವರ್ತಿಸುತ್ತಿರುವ ವಕ್ಫ್ ಸಚಿವ ಜಮೀರ್ಗೆ ಕಡಿವಾಣ ಹಾಕಿ ಎಂದು ಮಾಜಿ ಸಚಿವ, ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಮೀರ್ ವಕ್ಫ್ ಮಂಡಳಿಗೆ ಹಿಂದುಗಳಿಗೆ ಸೇರಿದ ಜಮೀನು, ಮಠಗಳು, ದೇವಸ್ಥಾನ, ಪರಿಶಿಷ್ಟರು, ಹಿಂದುಳಿದವರ ಜಮೀನು ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇವತ್ತು ರೈತರು, ಮಠ, ಮಂದಿರಗಳ ಆಸ್ತಿಗಳನ್ನು ವಕ್ಫ್ ಆಸ್ತಿ ಅಂತಾ ಘೋಷಿಸಿದವರು ನಾಳೆ ವಿಧಾನಸೌಧವನ್ನೂವಕ್ಫ್ ಆಸ್ತಿ ಎಂದು ಘೋಷಿಸಬಹುದು ಎಂದರು. ರೈತರು, ಮಠಗಳಿಗೆ ರಾಜ್ಯ ಸರ್ಕಾರ ವಕ್ಫ್ ಮಂಡಳಿಯಿಂದ ಜಾರಿಗೊಳಿಸಿದ ನೋಟಿಸ್ ಮಾತ್ರವಲ್ಲದೇ, ಆರ್ಟಿಸಿ ಕಾಲಂ 11ರಲ್ಲಿ ನಮೂದಿಸಿದ ವಕ್ಫ್ ಹೆಸರನ್ನೂ ಸಂಪೂರ್ಣ ರದ್ದುಪಡಿಸಬೇಕು. ಪಹಣಿಯ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡಿದ ನಂತರ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ, ಸರ್ಕಾರವು ವಕ್ಫ್ ಮಂಡಳಿಯನ್ನೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.




