#Exclusive NewsTop News

ಬೇಗನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ಉತ್ತಮವೇ? ವೈದ್ಯರು ಹೇಳುವುದೇನು?

ನಿದ್ರೆ ಸರಿಯಾಗಿ ಮಾಡುವ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಉತ್ತಮ ನಿದ್ರೆ ನಿಮ್ಮನ್ನು ಮುಂದಿನ ದಿನಕ್ಕೆ ಸಿದ್ಧವಾಗಿಸುತ್ತದೆ. ಹಾಗಾಗಿಯೇ ಹಿಂದಿನವರು ನಮಗೆ ನಿದ್ರೆ ಸರಿಯಾಗಿ ಮಾಡಿ ಎಂದು ಉಪದೇಶಿಸುತ್ತಿದ್ದರು. ಅದರಲ್ಲಿಯೂ ನಮ್ಮ ದೇಶದಲ್ಲಿ, ಮಕ್ಕಳು ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪೋಷಕರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಸಂಶೋಧನೆ ಇದನ್ನು ಅಲ್ಲಗಳೆದಿದೆ. ಲಂಡನ್ನ ಇಂಪೀರಿಯಲ್ ಕಾಲೇಜಿನ ಹೊಸ ಸಂಶೋಧನೆಯು ಮುಂಜಾನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ನಿಮಗೆ ಹೆಚ್ಚು ಒಳ್ಳೆಯದು ಎಂದು ಹೇಳಿದೆ. ಹಾಗಾದರೆ ಈ ಅಧ್ಯಯನ ಹೇಳುವುದೇನು? ಇಲ್ಲಿದೆ ಮಾಹಿತಿ.

ನಿದ್ರೆ ಎಲ್ಲಾ ರೋಗಕ್ಕೂ ಮೊದಲ ಔಷಧ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ನಿದ್ರೆ ಸರಿಯಾಗಿ ಮಾಡುವ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಉತ್ತಮ ನಿದ್ರೆ ನಿಮ್ಮನ್ನು ಮುಂದಿನ ದಿನಕ್ಕೆ ಸಿದ್ಧವಾಗಿಸುತ್ತದೆ. ಹಾಗಾಗಿಯೇ ಹಿಂದಿನವರು ನಮಗೆ ನಿದ್ರೆ ಸರಿಯಾಗಿ ಮಾಡಿ ಎಂದು ಉಪದೇಶಿಸುತ್ತಿದ್ದರು. ಅದರಲ್ಲಿಯೂ ನಮ್ಮ ದೇಶದಲ್ಲಿ, ಮಕ್ಕಳು ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪೋಷಕರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಸಂಶೋಧನೆ ಇದನ್ನು ಅಲ್ಲಗಳೆದಿದೆ. ಲಂಡನ್ನ ಇಂಪೀರಿಯಲ್ ಕಾಲೇಜಿನ ಹೊಸ ಸಂಶೋಧನೆಯು ಮುಂಜಾನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ನಿಮಗೆ ಹೆಚ್ಚು ಒಳ್ಳೆಯದು ಎಂದು ಹೇಳಿದೆ. ಹಾಗಾದರೆ ಈ ಅಧ್ಯಯನ ಹೇಳುವುದೇನು? ಇಲ್ಲಿದೆ ಮಾಹಿತಿ.

ನ್ಯೂರೋಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೇಗ ಏಳುವವರಿಗಿಂತ ತಡವಾಗಿ ಎಚ್ಚರಗೊಳ್ಳುವವರು ಶ್ರೇಷ್ಠ ಅಥವಾ ಇತ್ತಮ ಎಂದು ಪರಿಗಣಿಸಲಾಗಿದೆ. ಈ ಪ್ರಯೋಗವನ್ನು 26,000 ಜನರ ಮೇಲೆ ನಡೆಸಿದ್ದು “ತಡವಾಗಿ ಎದ್ದೇಳುವವರು ಬುದ್ಧಿವಂತಿಕೆ, ತಾರ್ಕಿಕತೆ ಮತ್ತು ಮೆಮೊರಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ” ಎಂದು ಕಂಡು ಹಿಡಿದಿದೆ.

ಹೈದರಾಬಾದ್ ಅಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ ಅವರು ಇದನ್ನು ಇನ್ನಷ್ಟು ವಿವರವಾಗಿ ತಿಳಿಸಿದ್ದು, “ಸಾಮಾನ್ಯವಾಗಿ ನಿದ್ರೆಯ ಮಾದರಿಯು ಕ್ರೋನೊಟೈಪ್ ಗಳಿಂದ ನಿರ್ಧಾರವಾಗುತ್ತದೆ. ಇದನ್ನು ಆನುವಂಶಿಕವಾಗಿ ನಿರ್ಧರಿಸಲಾಗುತ್ತದೆ ಹಾಗಾಗಿ ಇದನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಗೂಬೆಗಳ ಕ್ರೋನೊಟೈಪ್ ತಡವಾಗಿ ಮಲಗಲು ಮತ್ತು ತಡವಾಗಿ ಎಚ್ಚರಗೊಳ್ಳಲು ಬಯಸುತ್ತದೆ, ಆದರೆ ಲಾರ್ಕ್ ಕ್ರೋನೊಟೈಪ್ ಬೇಗ ಮಲಗಿ ಬೇಗನೆ ಎದ್ದೇಳುತ್ತದೆ. ಅಂದರೆ ಇದು ಕ್ರೋನೊಟೈಪ್ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.

ಎಷ್ಟು ಸಮಯ ಮಲಗಬೇಕು?

ವಯಸ್ಕರಿಗೆ ಎಷ್ಟು ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ ಎಂಬುದರ ಬಗ್ಗೆ ಡಾ. ಕುಮಾರ್ ಮಾತನಾಡಿದ್ದು, “ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ರೆ ಅವಶ್ಯವಾಗಿ ಬೇಕಾಗುತ್ತದೆ. ಏಳು ಗಂಟೆಗಳಿಗಿಂತ ಕಡಿಮೆ ಅಥವಾ ಒಂಬತ್ತು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದಲ್ಲಿ ವ್ಯಕ್ತಿಯು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಒಳಗಾಗುವ ಅಪಾಯವಿದೆ.” ಎಂದು ಅವರು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button