Top Newsಸಿನಿಮಾಸುದ್ದಿ

ಇಬ್ಬರು ಮೂವರಾಗುತ್ತಿದ್ದೇವೆ ಫೋಟೋ ಶೇರ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ದಂಪತಿ

ಕನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು ಕೆಲ ತಿಂಗಳ ಹಿಂದೆ ಅಭಿಮಾನಿಗಳಿಗೆ ಗುಡ್​ನ್ಯೂಸ್​​ವೊಂದನ್ನು ಕೊಟ್ಟಿದ್ದರು. ‘ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ಹೇಳುವ ಮೂಲಕ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದರು.

ಇದೀಗ ನಟಿ ಅಮಲಾ ಪೌಲ್​ ಹಾಗೂ ಪತಿ ಜಗತ್ ದೇಸಾಯಿ ತಮ್ಮಿಬ್ಬಿರ ಮುದ್ದಾದ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ನಟಿ ಅಮಲಾ ಪೌಲ್ ದಂಪತಿ ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದ ನಟಿ ಅಮಲಾ ಪೌಲ್ ಹೊಸ ಮಗನ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಎಂದರೆ ಓಣಂ ದಿನವೇ ಮುದ್ದಾದ ಮಗ ಇಲೈ ಮುಖವನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟ ನಟಿಯರಿಗೆ ಹುಟ್ಟುವ ಮಕ್ಕಳ ಮುಖವನ್ನು ನೋಡಬೇಕು ಅಂತ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಓಣಂ ಹಬ್ಬದ ದಿನವೇ ನೆಚ್ಚಿನ ನಟಿಯ ಮಗನನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Comments (0)

Your email address will not be published. Required fields are marked *

Back to top button