#Exclusive NewsTop News

ಶಿಗ್ಗಾವಿ ಉಪ ಕದನ ಪಟ್ಟಿಯಲ್ಲಿ ಭರತ್ ಬೊಮ್ಮಾಯಿ ಹೆಸರು!

ಶಿಗ್ಗಾವಿ: ಮಾಜಿ ಸಿಎಂ ಬೊಮ್ಮಾಯಿ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿರುವ ಹಾವೇರಿ ಜಿಲ್ಲೆ ಶಿಗ್ಗಾವಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಬಿಜೆಪಿಯಲ್ಲಿ 57 ಮಂದಿ ಸ್ಪರ್ಧೆಗೆ ಉತ್ಸುಕತೆ ತೋರಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ|ರಾಧಾಮೋಹನ ಅಗರವಾಲ್ ನೇತೃ ತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಪಟ್ಟಿ ವರಿಷ್ಠರಿಗೆ ಸಲ್ಲಿಕೆಯಾಗಿದ್ದು,ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಹೆಸರೂ ಕಾಣಿಸಿಕೊಂಡಿರುವುದು ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದೆ. ಉಪಚುನಾವಣೆಯಲ್ಲಿ ಭರತ್ ಸ್ಪರ್ಧೆ
ಮಾಡುವ ವಿಚಾರ ವರಿಷ್ಠರ ವಿವೇಚನೆಗೆ ಬಿಟ್ಟಿದ್ದು ಎಂದು ಬೊಮ್ಮಾಯಿ ಈತನಕ ಜಾರಿ ಕೊಳ್ಳುತ್ತ ಬಂದಿದ್ದರು. ಆದರೆ ಈಗ ಭರತ್ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿರುವುದು ಇತರ ಆಕಾಂಕ್ಷಿಗಳ ವಲಯದಲ್ಲಿ ಟಿಕೆಟ್ ಕೈತಪ್ಪುವ ಆತಂಕಕ್ಕೆ ಕಾರಣವಾಗಿದೆ.ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಜನರನ್ನು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಪ್ರತಿ ಬೂತ್‌ನಲ್ಲೂ 400 ಜನರನ್ನು ನೋಂದಾಯಿಸಿದರೆ ಗೆಲುವು ಸುಲಭವಾಗುತ್ತದೆ. ಪಕ್ಷ ಸೂಚಿಸುವ ಅಭ್ಯರ್ಥಿ ಗೆಲ್ಲಿಸುವ ಭರವಸೆಯನ್ನು ಬೊಮ್ಮಾಯಿ ನೀಡಿದ್ದಾರೆ. ಎಲ್ಲ ಆಕಾಂಕ್ಷಿಗಳೊಂದಿಗೆ ಂದಿಗೆ ಸಭೆ ನಡೆ ಸಲಾಗಿದ್ದು, ಪಕ್ಷದ ಅಭ್ಯರ್ಥಿ ಪರ ಒಮ್ಮತ ದಿಂದ ಕೆಲಸ ಮಾಡುವ ಪ್ರತಿಜ್ಞೆ ಮಾಡಿ ದ್ದಾರೆಂದು ಡಾ|ಆಗರವಾಲ್ ತಿಳಿಸಿದರು.

Bharath Bommai: ಸಿಎಂ ಬೊಮ್ಮಾಯಿ ಪುತ್ರ, ಭರತ್​​ ಬೊಮ್ಮಾಯಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಗರಿ - Kannada News | Bharath Bommai: CM Bommai's son, Bharath Bommai won an international award | TV9 Kannada

 

Comments (0)

Your email address will not be published. Required fields are marked *

Back to top button