ಉತ್ತಮ ಮತ್ತು ಆರೋಗ್ಯಕರ ಚರ್ಮವು ನಿಜಕ್ಕೂ ಆಶೀರ್ವಾದ. ಆದರೆ ಹೊಳೆಯುವ ಚರ್ಮವನ್ನು ಪಡೆಯುವುದು ಅಷ್ಟು ಸುಲಭವಲ್ಲ.ಕೆಲವರಿಗೆ ಅದು ವರ. ಆದ್ರೆ ಖಂಡಿತಾ ಕೆಲವರು ಸುಂದರ ಹೊಳೆಯುವ ತ್ವತೆಗೆ ಸರ್ಕಸ್ ಮಾಡ್ಲೇಬೇಕು..ಜೊತೆಗೆ ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಕೂಡ ಪಡೆಯಬಹುದು.
- ನಿಂಬೆಹಣ್ಣು-ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಹೊಂದಿರುವ ನಿಂಬೆಹಣ್ಣು, ಹೊಳಪುಯುಕ್ತ ಚರ್ಮಕ್ಕೆ ನಿಂಬೆಹಣ್ಣು ಉತ್ತಮ ಎಂದು ಹೇಳಲಾಗುತ್ತದೆ. ಇದು ಅದ್ಭುತ ಮನೆಮದ್ದು ಎಂದು ಹಲವು ಬಾರಿ ಸಾಬೀತಾಗಿದೆ.ಚರ್ಮವನ್ನು ತೇವಗೊಳಿಸುವ ಮೂಲಕ ಹಗುರವಾದ ಚರ್ಮದ ಬಣ್ಣವನ್ನು ಸಾಧಿಸಲು ಸಹಾಯ ಮಾಡುತ್ತದೆ.
- ಬಟರ್ ಫ್ರೂಟ್/ಬೆಣ್ಣೆ ಹಣ್ಣು– ಮೊದಲು ಬೆಣ್ಣೆ ಹಣ್ಣನ್ನು ನುಣಗೆ ಪೇಸ್ಟ್ ಮಾಡಿ. ಅದಕ್ಕೆ ಎರಡು ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದರೆ , ನಿಮ್ಮ ತ್ವಚೆಯ ಹೊಳಪು ಹೆಚ್ಚಾಗುತ್ತದೆ.
- ಓಟ್ಸ್ -ನಿಮ್ಮ ಮುಖದ ಕಾಂತಿ ಹೆಚ್ಚು ಮಾಡಲು ಓಟ್ಸ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಓಟ್ ಅನ್ನು ಚೆನ್ನಾಗಿ ಅನ್ನು ಪೆಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಆ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ.ಈ ರೀತಿ ಮಾಡುವುದರಿಂದ ನಿಮ್ಮ ಮುಖ ಕಾಂತಿಯುತವಾಗುತ್ತದೆ.
- ಬೇಕಿಂಗ್ ಸೋಡಾ– 2 ಟೇಬಲ್ ಸ್ಪೂನ್ ಫೇಶಿಯಲ್ ಮಾಯಿಶ್ಚರೈಸರ್ ಅನ್ನು ತೆಗೆದುಕೊಂಡು ಅದನ್ನು 1 ಚಮಚ ಅಡಿಗೆ ಸೋಡಾದೊಂದಿಗೆ ಚನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬಿಡಬೇಕು ನಂತರ ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಮೃದುವಾದ ಮೇಕಪ್ ಸ್ಪಾಂಜ್ ತೆಗೆದುಕೊಂಡು ನಿಮ್ಮ ಮುಖಕ್ಕೆ ವೃತ್ತಾಕಾರದ ಚಲನೆಯಲ್ಲಿ ಸುಮಾರು 2 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡ್ಬೇಕು ಈ ರೀತಿ ಮಾಡೋದ್ರಿಂದ ನಿಮ್ಮ ತ್ವಚೆಗೆ ಹೊಳಪು ಬರುತ್ತದೆ.